ಖ್ಯಾತ ತೆಲುಗು ಚಿತ್ರನಟ ಶಿವಾಜಿ ರಾಜಾಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

Update: 2020-05-06 07:34 GMT

ಹೊಸದಿಲ್ಲಿ, ಮೇ 6: ಹಲವು ಟಿವಿ ಶೋಗಳು ಹಾಗೂ ಚಲನಚಿತ್ರಗಳಲ್ಲಿ ಹಾಸ್ಯ ಪಾತ್ರದ ಮೂಲಕ ಜನಜನಿತವಾಗಿರುವ ತೆಲುಗಿನ ಸ್ಟಾರ್ ನಟ ಶಿವಾಜಿ ರಾಜಾ ಮಂಗಳವಾರ ರಾತ್ರಿ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎದೆನೋವಿನಿಂದ ಬಳಲುತ್ತಿದ್ದ 58ರ ವಯಸ್ಸಿನ ರಾಜಾರನ್ನು ಅವರ ಕುಟುಂಬದ ಸದಸ್ಯರು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಸೇರಿಸಿದ್ದರು.ಶಿವಾಜಿ ರಾಜಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ತೀವ್ರ ನಿಗಾ ಘಟಕದ ನಿಗಾದಲ್ಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಶಿವಾಜಿ ರಾಜಾ 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 2001ರಲ್ಲಿ ಕೃಷ್ಣವಂಶಿ ನಿರ್ದೇಶನದ 'ಮುರಾರಿ' ಚಿತ್ರದಲ್ಲಿನ ನಟನೆಯ ಮೂಲಕ ಖ್ಯಾತಿ ಪಡೆದಿದ್ದರು. ಕಿರುತೆರೆ ಕ್ಷೇತ್ರದಲ್ಲೂ ಪ್ರಸಿದ್ಧಿ ಪಡೆದಿದ್ದ ರಾಜಾ ಹಾಸ್ಯಪಾತ್ರದಿಂದ ಜನರನ್ನು ನಗಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News