ಮುಂಬೈಯ ಆರ್ಥರ್ ರೋಡ್ ಜೈಲಿನಲ್ಲಿ 80 ಮಂದಿಗೆ ಕೊರೋನ ವೈರಸ್ ದೃಢ

Update: 2020-05-07 16:14 GMT

ಮುಂಬೈ: ಮುಂಬೈಯ ಆರ್ಥರ್ ರೋಡ್ ಸೆಂಟ್ರಲ್ ಜೈಲಿನಲ್ಲಿ 80 ಜನರಲ್ಲಿ ಕೊರೋನ ವೈರಸ್ ದೃಢಪಟ್ಟಿರುವುದು ಹೊಸ ಆತಂಕವನ್ನು ಸೃಷ್ಟಿಸಿದೆ.

ಈಗಾಗಲೇ 144 ಜನರನ್ನು ಪರೀಕ್ಷಿಸಲಾಗಿದ್ದು,  72 ಕೈದಿಗಳು ಮತ್ತು 7 ಸಿಬ್ಬಂದಿಗಳಲ್ಲಿ ಕೊರೋನ ವೈರಸ್ ಇರುವುದು ದೃಢಪಟ್ಟಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮೇ 8ರಂದು ಬೆಳಗ್ಗೆ ಪರೀಕ್ಷೆಗೊಳಪಟ್ಟ ಎಲ್ಲಾ ವಿಚಾರಣಾಧೀನ ಕೈದಿಗಳನ್ನು ಜಿಟಿ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಹಿರಿಯ ಜೈಲು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News