ಗುಜರಾತ್ ಸಚಿವರ ಚುನಾವಣಾ ಗೆಲುವು ಅಸಿಂಧುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

Update: 2020-05-15 09:02 GMT

ಹೊಸದಿಲ್ಲಿ,ಮೇ 15: ಗುಜರಾತ್ ಸರಕಾರದ ಶಿಕ್ಷಣ ಹಾಗೂ ಕಾನೂನು ಸಚಿವ ಭೂಪೇಂದ್ರ ಸಿನ್ಹಾ ಚುಡಸಮ 2017ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿದ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಇಂದು ತಡೆ ಹೇರಿದೆ.

ಈ ವಾರಾರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶ್ವಿನ್ ರಾಥೋಡ್ ಸಲ್ಲಿಸಿದ ಅರ್ಜಿಯ ವಿಚಾರ ನಡೆಸಿದ ಗುಜರಾತ್ ಹೈಕೋರ್ಟ್ ಸಚಿವ ಚುಡಸಮ ಅವರ ಚುನಾವಣೆ ಆಯ್ಕೆ ಅಸಿಂಧು ಎಂದು  ಮಹತ್ವದ ತೀರ್ಪು ನೀಡಿತ್ತು.

ಡಿಸೆಂಬರ್ 2017ರಲ್ಲಿ ನಡೆದ ಚುನಾವಣೆಯಲ್ಲಿ ಧೋಲ್ಕಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಅಶ್ವಿನ್ ರಾಥೋಡ್ ಅವರು ಚುಡಸಮ ಅವರು 327 ಮತಗಳ ಅಂತರದಿಂದ ಸಾಧಿಸಿದ್ದ ಗೆಲುವನ್ನು ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಿದ್ದರು. ಚುಡಸಮ ಅವರು ‘ಅಕ್ರಮ ನಡೆಸಿದ್ದಾರೆ ಹಾಗೂ ವಿವಿಧ ಹಂತಗಳಲ್ಲಿ ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿದ್ದರು, ಮುಖ್ಯವಾಗಿ ಮತ ಎಣಿಕೆ ಸಂದರ್ಭವೂ ನಿಯಮಗಳನ್ನು ಉಲ್ಲಂಘಿಸಲಾಗಿತ್ತು’ ಎಂದು ರಾಥೋಡ್ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News