ಸೈನಿಕರೊಬ್ಬರಿಗೆ ಕೊರೋನ ಸೋಂಕು ದೃಢ: ಸೇನಾ ಭವನದ ಒಂದು ಭಾಗ ಸೀಲ್

Update: 2020-05-15 12:46 GMT

ಹೊಸದಿಲ್ಲಿ: ಸೈನಿಕರೊಬ್ಬರಿಗೆ ಕೋವಿಡ್-19 ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿರುವ ಸೇನಾ ಭವನ ಕಟ್ಟಡದ ಒಂದು ಅಂತಸ್ತಿನ ಒಂದು ಭಾಗವನ್ನು ಸೀಲ್ ಮಾಡಲಾಗಿದೆ. ಈ ಭಾಗವನ್ನು ಸ್ಯಾನಿಟೈಸ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ.  ಸದ್ಯ ಅಧಿಕಾರಿಗಳು ಈ ಸೈನಿಕನ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಹುಡುಕಿ ಕ್ವಾರಂಟೈನ್‍ಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಕಳೆದ ತಿಂಗಳು ರಾಜಧಾನಿಯ ಜೋರ್ ಬಾಘ್ ಪ್ರದೇಶದಲ್ಲಿರುವ ರಾಜೀವ್ ಗಾಂಧಿ ಭವನದಲ್ಲಿರುವ  ನಾಗರಿಕ ವಿಮಾನಯಾನ ಸಚಿವಾಲಯದ ಸಿಬ್ಬಂದಿಯೊಬ್ಬರಿಗೆ  ಕೊರೋನ ಸೋಂಕು ದೃಢಪಟ್ಟ ನಂತರ ಕಚೇರಿಯನ್ನು ಸೀಲ್ ಮಾಡಲಾಗಿತ್ತು. ಇದರ ಬೆನ್ನಿಗೇ ನೀತಿ ಆಯೋಗದ ಸಿಬ್ಬಂದಿಯೊಬ್ಬರು ಕೋವಿಡ್-19 ಪಾಸಿಟಿವ್ ಆದ ಹಿನ್ನೆಲೆಯಲ್ಲಿ ನೀತಿ ಆಯೋಗದ ಕಚೇರಿಯನ್ನೂ ಸೀಲ್ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News