ವಲಸೆ ಕಾರ್ಮಿಕರಿಗೆ ಉಚಿತ ಆಹಾರ ನೀಡಿ ಮಾನವೀಯತೆ ಮೆರೆಯುತ್ತಿರುವ 80ರ ಹರೆಯದ ಕೂಲಿ ಕಾರ್ಮಿಕ ಮುಜಿಬುಲ್ಲಾ

Update: 2020-05-31 11:49 GMT
ಮುಜಿಬುಲ್ಲಾ (Photo: Twitter)

ಲಕ್ನೊ, ಮೇ 31: ಲಕ್ನೋದಲ್ಲಿ ವೃತ್ತಿಯಲ್ಲಿ ಕೂಲಿಯಾಗಿರುವ ಮುಜಿಬುಲ್ಲಾ ಎಂಬವರು 80ರ ಇಳಿ ವಯಸ್ಸಿನಲ್ಲಿಯೂ ಚಾರ್ಬಾಗ್ ರೈಲ್ವೆ ನಿಲ್ದಾಣದಲ್ಲಿ ವಲಸಿಗ ಕಾರ್ಮಿಕರಿಗೆ ಉಚಿತ ಸೇವೆಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮುಜಿಬುಲ್ಲಾ ಅವರು ಕಾರ್ಮಿಕರ ಲಗೇಜ್ ಹೊತ್ತುಕೊಂಡು ನೆರವಾಗುವುದಲ್ಲದೆ, ಅವರಿಗೆ ಆಹಾರವನ್ನು ನೀಡುತ್ತಾರೆ. ತನ್ನ ಈ ಸೇವೆಗೆ ಅವರಿಂದ ಹಣವನ್ನು ಪಡೆಯಲು ನಿರಾಕರಿಸುತ್ತಾರೆ.

ಮುಜಿಬುಲ್ಲಾ ಚಾರ್ಗಾಬ್ ರೈಲ್ವೆ ನಿಲ್ದಾಣದಲ್ಲಿ ಪ್ರತಿದಿನ 8ರಿಂದ 10 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. 80ರ ವಯಸ್ಸಿನಲ್ಲೂ 50 ಕೆಜಿ ಅಧಿಕ ಭಾರದ ವಸ್ತುಗಳನ್ನು ಎತ್ತುತ್ತಾರೆ. ನೀವು ಏಕೆ ಉಚಿತವಾಗಿ ವಲಸೆ ಕಾರ್ಮಿಕರಿಗೆ ನೆರವಾಗುತ್ತೀರಿ? ಎಂದು ಕೇಳಿದರೆ, ಇದು ನನ್ನ ಕರ್ತವ್ಯ ಎಂದು ಹೇಳುತ್ತಾರೆ.

ಮುಜಿಬುಲ್ಲಾ ಅವರು ಪ್ರತಿದಿನ 6 ಕಿ.ಮೀ. ನಡೆದುಕೊಂಡು ಬಂದು ಬಡವರಿಗೆ ನೆರವಾಗುತ್ತಿದ್ದಾರೆ. ಇವರ ಪ್ರಯತ್ನವನ್ನು ಗುರುತಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶಂಸಾ ಪತ್ರವನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News