ದಿಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆ: ಮನೋಜ್ ತಿವಾರಿ ಜಾಗಕ್ಕೆ ಅದೇಶ್ ಕುಮಾರ್

Update: 2020-06-02 10:08 GMT

ಹೊಸದಿಲ್ಲಿ: ದಿಲ್ಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿಯವರ ಜಾಗಕ್ಕೆ ಅದೇಶ್ ಕುಮಾರ್ ಗುಪ್ತಾರನ್ನು ನೇಮಿಸಿ ಇಂದು ಬಿಜೆಪಿ ಆದೇಶ ಹೊರಡಿಸಿದೆ.

ಅದೇಶ್ ಗುಪ್ತಾ ಉತ್ತರ ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ ಮೇಯರ್ ಆಗಿ ಈ ಹಿಂದೆ ಸೇವೆ ಸಲ್ಲಿಸಿದ್ದರು.

2016ರಲ್ಲಿ ಮನೋಜ್ ತಿವಾರಿಯವರನ್ನು ದಿಲ್ಲಿ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ದಿಲ್ಲಿ ವಿಧಾನ ಸಭಾ ಚುನಾವಣೆಯ ಹೀನಾಯ ಸೋಲು ಮನೋಜ್ ತಿವಾರಿ ನಾಯಕತ್ವಕ್ಕೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News