ದೇಶದ ರಕ್ಷಣಾ ಇಲಾಖೆಯ ಕಾರ್ಯದರ್ಶಿಗೆ ಕೊರೋನ ಸೋಂಕು ದೃಢ

Update: 2020-06-04 05:37 GMT

 ಹೊಸದಿಲ್ಲಿ, ಜೂ.4: ದೇಶದ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಅಜಯ ಕುಮಾರ್‌ಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದ್ದು,ಅವರ ಆರೋಗ್ಯ ಸ್ಥಿರವಾಗಿದ್ದು ಅವರೀಗ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.

ಕುಮಾರ್‌ಗೆ ಸ್ವಲ್ಪ ಜ್ವರ ಕಾಣಿಸಿಕೊಂಡ ಕಾರಣ ಪರೀಕ್ಷೆಗೆ ಒಳಗಾಗಿದ್ದರು.ಇದೀಗ ಕೊರೋನ ಸೋಂಕಿಗೆ ಒಳಗಾಗಿರುವ ಸರಕಾರದ ಮೊದಲ ಉನ್ನತ ಅಧಿಕಾರಿಯಾಗಿದ್ದಾರೆ. ಕುಮಾರ್ ಅವರೊಂದಿಗೆ ಒಡನಾಟದಲ್ಲಿದ್ದವರನ್ನು ಪತ್ತೆ ಹಚ್ಚುವ ಕಾರ್ಯ ಆರಂಭಿಸಲಾಗಿದೆ. ರೈಸಿನಾ ಹಿಲ್ಸ್ ದಕ್ಷಿಣ ಬ್ಲಾಕ್‌ನಲ್ಲಿರುವ ಪ್ರಧಾನ ಕಚೇರಿಯಲ್ಲಿ 35 ಸಿಬ್ಬಂದಿಗಳು ಕಾರ್ಯವೆಸಗುತ್ತಿದ್ದಾರೆ. ಕಾರ್ಯದರ್ಶಿಗೆ ರೋಗ ದೃಢಪಟ್ಟಿರುವುದರಿಂದ ಎಲ್ಲ ಸಿಬ್ಬಂದಿಗಳು ಹೋಂ ಕ್ವಾರಂಟೈನ್‌ನಲ್ಲಿರುವಂತೆ ಹೇಳಲಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 9,304 ಕೊರೋನ ವೈರಸ್ ಪ್ರಕರಣ ದಾಖಲಾಗಿದ್ದು, 260 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೋವಿಡ್-19 ಸೋಂಕಿಗೆ ಒಳಗಾದವರ ಸಂಖ್ಯೆ ಗುರುವಾರ 2,16,919ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 6,075 ಕ್ಕೆ ತಲುಪಿದೆ. 1,04,106 ಜನರು ಡಿಸ್ಚಾರ್ಚ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News