ಎಚ್-1ಬಿ ವೀಸಾ ಸ್ಥಗಿತಗೊಳಿಸಲು ಡೊನಾಲ್ಡ್ ಟ್ರಂಪ್ ಚಿಂತನೆ: ವರದಿ

Update: 2020-06-12 15:23 GMT

ವಾಶಿಂಗ್ಟನ್, ಜೂ. 12: ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಹೆಚ್ಚಾಗಿ ಅಪೇಕ್ಷಿಸುತ್ತಿರುವ ಎಚ್-1ಬಿ ಸೇರಿದಂತೆ ಹಲವಾರು ಉದ್ಯೋಗ ವೀಸಾಗಳನ್ನು ಸ್ಥಗಿತಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಶೀಲಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಭಾರೀ ಪ್ರಮಾಣದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಪ್ರಸ್ತಾಪಿತ ವೀಸಾ ಸ್ಥಾಗಿತ್ಯವು ಅಕ್ಟೋಬರ್ ಒಂದರಿಂದ ಆರಂಭಗೊಳ್ಳುವ ಸರಕಾರದ ಹೊಸ ವರ್ಷಕ್ಕೂ ವಿಸ್ತರಣೆಯಾಗಬಹುದಾಗಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಗುರುವಾರ ವರದಿ ಮಾಡಿದೆ. ಸಾಮಾನ್ಯವಾಗಿ ಅಕ್ಟೋಬರ್ ಒಂದರಂದು ಹಲವಾರು ಹೊಸ ವೀಸಾಗಳನ್ನು ನೀಡಲಾಗುತ್ತದೆ.

‘‘ಪ್ರಸ್ತಾಪಿತ ನಿಯಮಗಳು, ದೇಶದ ಹೊರಗಿನ ಎಚ್-1ಬಿ ವೀಸಾದಾರರು ಅಮೆರಿಕಕ್ಕೆ ಕೆಲಸಕ್ಕೆ ಬರುವುದನ್ನು ನಿಷೇಧಿಸಬಹುದು. ಆದರೆ, ಇಂಥ ವೀಸಾಗಳನ್ನು ಹೊಂದಿರುವವರು ಈಗಾಗಲೇ ಅಮೆರಿಕದಲ್ಲಿದ್ದರೆ ಅವರಿಗೆ ಈ ನಿಮಯಗಳು ಅನ್ವಯಿಸಲಾರದು’’ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News