ಸತತ 10ನೇ ದಿನ ಪೆಟ್ರೋಲ್,ಡೀಸೆಲ್ ದರದಲ್ಲಿ ಏರಿಕೆ

Update: 2020-06-16 05:19 GMT

ಹೊಸದಿಲ್ಲಿ, ಜೂ.16: ಸತತ 10ನೇ ದಿನ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಏರಿಕೆ ಮಾಡಲಾಗಿದೆ.

12 ವಾರಗಳ ವಿರಾಮದ ಬಳಿಕ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಸತತ 10ನೇ ದಿನವಾದ ಮಂಗಳವಾರ ಇಂಧನ ದರ ಏರಿಕೆ ಮಾಡಿವೆ.

 ಮಂಗಳವಾರ ಬೆಳಗ್ಗೆ ಆರು ಗಂಟೆಗೆ ಅನ್ವಯವಾಗುವಂತೆ ದಿಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 47 ಪೈಸೆ ಹಾಗೂ ಡೀಸೆಲ್ ದರ ಲೀಟರ್‌ಗೆ 57 ಪೈಸೆ ಹೆಚ್ಚಿಸಲಾಗಿದೆ.

ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ ಲೀಟರ್‌ವೊಂದಕ್ಕೆ 76.13 ರೂ. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 75.19 ರೂ.ಗೆ ಪರಿಷ್ಕೃತವಾಗಿದೆ ಎಂದು ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಿಳಿಸಿದೆ. ಕಳೆದ 10 ದಿನಗಳ ಅವಧಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ಒಟ್ಟು 5.47 ರೂ. ಹಾಗೂ ಡೀಸೆಲ್ ದರ 5.80 ರೂ. ಹೆಚ್ಚಳವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News