ನವೆಂಬರ್ ನಲ್ಲಿ ಕೊರೋನ ಹೆಚ್ಚಳ ಎಂಬ ತನ್ನ ವಿಜ್ಞಾನಿಗಳ ವರದಿಯಿಂದ ಅಂತರ ಕಾಯ್ದುಕೊಂಡ ಐಸಿಎಂಆರ್

Update: 2020-06-16 10:05 GMT

ಹೊಸದಿಲ್ಲಿ: ಭಾರತದಲ್ಲಿ ಕೊರೋನವೈರಸ್‍ ನ ಗರಿಷ್ಠ ಪ್ರಕರಣಗಳು ನವೆಂಬರ್‍ ನಲ್ಲಿ ವರದಿಯಾಗಲಿವೆ ಎಂದು ತಿಳಿಸುವ  ಅಧ್ಯಯನ ವರದಿಯಿಂದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ದೂರ ಸರಿದು ನಿಂತಿದೆ. ಈ ಅಧ್ಯಯನ ವರದಿಯನ್ನು  ಐಸಿಎಂಆರ್ ನ ಕನಿಷ್ಠ ಇಬ್ಬರು ವಿಜ್ಞಾನಿಗಳು ಹಾಗೂ ಸರಕಾರ ನೇಮಿತ ರಾಷ್ಟ್ರೀಯ ಕೋವಿಡ್ ಕ್ರಿಯಾ ಪಡೆಯ ಅಧ್ಯಕ್ಷರು ಸಿದ್ಧಪಡಿಸಿದ್ದರಲ್ಲದೆ ಅದರ ವಿವರಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಇಲ್ಲಿಯ ತನಕ ವಿಮರ್ಶೆಗೊಳಪಡದ ಈ ಅಧ್ಯಯನಾ ವರದಿ ಜೂನ್ 12ರಿಂದ ಮೆಡ್‍ಕ್ಸಿರಿವ್ ಪ್ರಿ-ಪ್ರಿಂಟ್ ಸರ್ವರ್‍ನಲ್ಲಿ ಲಭ್ಯವಿದೆ. ಸೂಕ್ತ ಕ್ರಮಗಳ ಜತೆಗೆ ಎಂಟು ವಾರಗಳ ಲಾಕ್ ಡೌನ್ ಹೇರಲ್ಪಟ್ಟರೂ ಭಾರತದಲ್ಲಿ ಕನಿಷ್ಠ 40 ಲಕ್ಷ ಮಂದಿ ಈ ಸೋಂಕಿಗೆ ತುತ್ತಾಗುತ್ತಾರೆ ಎಂದು ವರದಿ ಹೇಳಿದೆ.

ಶೇ. 20, ಶೇ. 40, ಶೇ. 60 ಹಾಗೂ ಶೇ. 80ರಷ್ಟು ಲಾಕ್ ಡೌನ್ ‍ನಲ್ಲಿ ಕೊನೆಯದು ಹೆಚ್ಚು ಪರಿಣಾಮಕಾರಿ ಎಂದು ಹೇಳಿದ ಅಧ್ಯಯನ ಈ ಕೋವಿಡ್-19 ಸಮಸ್ಯೆಯಿಂದಾಗಿ ದೇಶದ ಜಿಡಿಪಿಯ ಶೇ 6.2ರಷ್ಟು ವೆಚ್ಚವಾಗಲಿದೆ ಎಂದೂ ಅಂದಾಜಿಸಿದೆ. ಈ ಅಧ್ಯಯನಕ್ಕೆ ಐಸಿಎಂಆರ್ ಹಣಕಾಸಿನ ಸೌಲಭ್ಯ ಒದಗಿಸಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆಯಾದರೂ  ಐಸಿಎಂಆರ್ ಈ ಸುದ್ದಿಯನ್ನು ಟ್ವೀಟ್ ಮೂಲಕ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News