ಗ್ರಾಹಕರಿಗೆ ಆಘಾತ: ಸತತ 11ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ

Update: 2020-06-17 06:03 GMT

ಹೊಸದಿಲ್ಲಿ : ಲಾಕ್ ಡೌನ್ ಸಡಿಲಿಕೆಯ ನಂತರ  ದೇಶದಲ್ಲಿ ಇಂಧನಕ್ಕೆ ಬೇಡಿಕೆ ಮತ್ತೆ ಯಥಾಸ್ಥಿತಿಗೆ ಮರಳಿರುವಂತೆಯೇ  ಇಂದು ಸತತ ಹನ್ನೊಂದನೇ ದಿನ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆ ಮಾಡಲಾಗಿದೆ.

ಪೆಟ್ರೋಲ್  ಈಗ 55 ಪೈಸೆಯಷ್ಟು ತುಟ್ಟಿಯಾಗಿದ್ದು, ಡೀಸೆಲ್ ಬೆಲೆ ಲೀಟರಿಗೆ 60 ಪೈಸೆಯಷ್ಟು ಏರಿಕೆ ಕಂಡಿದೆ.  ಇಂದು ಸೇರಿದಂತೆ ಕಳೆದ 11 ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ರೂ. 6ರಷ್ಟು ಹಾಗೂ ಡೀಸೆಲ್ ಬೆಲೆ ರೂ. 6.40ರಷ್ಟು ಏರಿಕೆಯಾಗಿದೆ.

ಕಚ್ಛಾ ತೈಲ ಬೆಲೆ ಬ್ಯಾರಲ್‍ಗೆ  40 ಡಾಲರ್‍ನಷ್ಟು  ಇಳಿಕೆ ಕಂಡಿರುವ ಹೊರತಾಗಿಯೂ ಭಾರತದಲ್ಲಿ ಇಂಧನ ಬೆಲೆ ಕಳೆದ 19 ತಿಂಗಳುಗಳಲ್ಲಿಯೇ ಈಗ ಗರಿಷ್ಠವಾಗಿದೆ. ಇಂದು ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ರೂ 77.28 ಹಾಗೂ ಡೀಸೆಲ್ ಬೆಲೆ 75.79 ಆಗಿದ್ದರೆ ಮುಂಬೈಯಲ್ಲಿ  ಕ್ರಮವಾಗಿ ರೂ 84.15 ಹಾಗೂ ರೂ 74.32 ಆಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ರೂ 79.79 ಹಾಗೂ ಡೀಸೆಲ್ ಬೆಲೆ ರೂ 72.07 ಆಗಿದೆ.

ಮೂಲಗಳ ಪ್ರಕಾರ ತೈಲ ಕಂಪೆನಿಗಳು ಈ ಪ್ರತಿದಿನದ ಬೆಲೆಯೇರಿಕೆ ಪದ್ಧತಿಯನ್ನು ಇನೂ ಕೆಲ ದಿನಗಳ ಕಾಲ ಮುಂದುವರಿಸಿ ಲೀಟರ್‍ಗೆ ಸುಮಾರು ರೂ. 8ರಷ್ಟಿರುವ ಮಾರ್ಜಿನ್ ಅಂತರವನ್ನು ಸರಿದೂಗಿಸಲು ಯತ್ನಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News