ಈ ರಾಜ್ಯದಲ್ಲಿ ಕೊರೋನ ಸೋಂಕಿನಿಂದ 45 ಪೊಲೀಸರು ಮೃತ್ಯು

Update: 2020-06-18 15:15 GMT

ಮುಂಬೈ, ಜೂ.18: ಮಹಾರಾಷ್ಟ್ರದಲ್ಲಿ ಗುರುವಾರದವರೆಗೆ 3,820 ಪೊಲೀಸರಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದು, 45 ಪೊಲೀಸರು ಮೃತಪಟ್ಟಿದ್ದಾರೆ ಎಂದು ರಾಜ್ಯದ ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.

ಕೊರೋನ ಸೋಂಕಿಗೆ ಸಂಬಂಧಿಸಿ ರಾಜ್ಯದ ಪೊಲೀಸ್ ಹೆಲ್ಪ್‌ಲೈನ್ ಕರೆ ಸಂಖ್ಯೆ 100ಕ್ಕೆ ಬರುವ ಕರೆಗಳ ಸಂಖ್ಯೆ ನಿರಂತರವಾಗಿ ಏರುತ್ತಿದ್ದು ಸುಮಾರು 1,03,707 ಇಂತಹ ಕರೆಗಳನ್ನು ಸ್ವೀಕರಿಸಲಾಗಿದೆ. ಪೊಲೀಸರ ಮೇಲೆ ದಾಳಿ ನಡೆದಿರುವ 268 ಪ್ರಕರಣ ದಾಖಲಾಗಿದ್ದು 851 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರಕಾರದ ಅಧಿಕೃತ ಟ್ವಿಟರ್‌ನಲ್ಲಿ ಸರಣಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸರಕಾರದ ಆಶ್ರಯದಲ್ಲಿ 122 ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದ್ದು ಇಲ್ಲಿ ಇತರ ರಾಜ್ಯಗಳ 4,138 ಕಾರ್ಮಿಕರಿಗೆ ಆಹಾರ ಮತ್ತಿತರ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News