ಯೋಗಾಭ್ಯಾಸ ಮಾಡುವವರಿಗೆ ಕೊರೋನ ವೈರಸ್ ತಗಲುವ ಸಾಧ್ಯತೆ ಕಡಿಮೆ ಎಂದ ಕೇಂದ್ರ ಸಚಿವ
Update: 2020-06-21 09:42 GMT
ಹೊಸದಿಲ್ಲಿ, ಜೂ.21: ಯೋಗಾಭ್ಯಾಸ ಮಾಡುವವರಿಗೆ ಕೊರೋನ ವೈರಸ್ ಸೋಂಕು ತಗಲುವ ಸಾಧ್ಯತೆ ಕಡಿಮೆ ಎಂದು ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ ನಾಯ್ಕಾ ರವಿವಾರ ಅಭಿಪ್ರಾಯಪಟ್ಟಿದ್ದಾರೆ.
ಅಂತರ್‌ರಾಷ್ಟ್ರೀಯ ಯೋಗ ದಿನವಾದ ರವಿವಾರ ಸುದ್ಧಿ ಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ಸಚಿವ ನಾಯ್ಕಾ, ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ದೇಶ ಹಾಗೂ ವಿದೇಶದಾದ್ಯಂತ ಯೋಗ ಕುರಿತಂತೆ ಮಾಡಿರುವ ಪ್ರಚಾರವು ಕೋವಿಡ್-19 ಸೋಂಕು ವಿರುದ್ಧ ಹೋರಾಡಲು ಬಹಳಷ್ಟು ಸಹಾಯ ಮಾಡಿದೆ. ಯೋಗಾಭ್ಯಾಸ ಮಾಡುವವರಿಗೆ ಕೋವಿಡ್-19 ಸೋಂಕು ತಗಲುವ ಸಾಧ್ಯತೆ ಕಡಿಮೆ ಎಂದು ಹೇಳಿದರು. ಬಿಜೆಪಿ ಮುಖಂಡ ಶ್ರೀಪಾದ ನಾಯ್ಕಾ ಉತ್ತರ ಗೋವಾದ ಪಣಜಿ ಸಮೀಪವಿರುವ ತನ್ನ ಮನೆಯಲ್ಲಿ ಇಂದು ಯೋಗ ಮಾಡಿದರು.