5.3 ತೀವ್ರತೆಯ ಭೂಕಂಪದಿಂದ ನಡುಗಿದ ಮಿಝೊರಾಂ, ಮನೆ-ರಸ್ತೆಗಳಿಗೆ ಹಾನಿ

Update: 2020-06-22 15:33 GMT

ಐಜ್ವಾಲ್,ಜೂ.22: ಕಳೆದ ಐದು ದಿನಗಳಲ್ಲಿ ಎರಡು ಭೂಕಂಪಗಳನ್ನು ಅನುಭವಿಸಿದ್ದ ಮಿಝೊರಾಂನಲ್ಲಿ ಸೋಮವಾರ ಮತ್ತೊಮ್ಮೆ ಭೂಮಿ ನಡುಗಿದೆ.

ನಸುಕಿನ 4:10ಕ್ಕೆ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕೇಂದ್ರಬಿಂದು ಭಾರತ-ಮ್ಯಾನ್ಮಾರ್ ಗಡಿಯ ಚಂಫಾಯಿ ಜಿಲ್ಲೆಯ ಖ್ವಾಬುಂಗಾದ ರೆಖಾವ್ತಾರ್‌ನಲ್ಲಿ 20 ಕಿ.ಮೀ.ಆಳದಲ್ಲಿತ್ತು. ಭೂಕಂಪದಿಂದ ರೆಖಾವ್ತಾರ್‌ನ ಒಂದು ಚರ್ಚ್ ಸೇರಿದಂತೆ ಹಲವಾರು ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಹೆದ್ದಾರಿಗಳು ಮತ್ತು ಹಲವಾರು ಕಡೆಗಳಲ್ಲಿನ ರಸ್ತೆಗಳಲ್ಲಿ ಬಿರುಕುಗಳುಂಟಾಗಿವೆ.

ಭೂಕಂಪದಿಂದ ಯಾವುದೇ ಸಾವುನೋವು ಸಂಭವಿಸಿಲ್ಲ. ರಾಜಧಾನಿ ಐಜ್ವಾಲ್ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಕಂಪನಗಳ ಅನುಭವವಾಗಿತ್ತು ಎಂದು ರಾಜ್ಯ ಭೂಗರ್ಭ ವಿಜ್ಞಾನ ಮತ್ತು ಖನಿಜ ಸಂಪನ್ಮೂಲ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದರು.

ರವಿವಾರವೂ ಸಂಜೆ 4:10ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪಕ್ಕೆ ಮಿರೆರಾಮ್ ಸಾಕ್ಷಿಯಾಗಿತ್ತು. ಅದಕ್ಕೂ ಮುನ್ನ ಜೂ.18ರಂದು 4.6 ತೀವ್ರತೆಯ ಇನ್ನೊಂದು ಭೂಕಂಪ ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News