ಸತತ 21 ದಿನಗಳ ಬಳಿಕ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆಗೆ ಬ್ರೇಕ್
Update: 2020-06-28 06:41 GMT
ಹೊಸದಿಲ್ಲಿ, ಜೂ.28: ಸತತ 21 ದಿನಗಳ ಕಾಲ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿದ್ದ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ರವಿವಾರ ಇಂಧನ ಬೆಲೆ ಏರಿಕೆಗೆ ವಿರಾಮ ನೀಡಿವೆ.
ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 80.38ರೂ. ಇದ್ದು, ಈ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಮಾಡಲಾಗಿಲ್ಲ. ಡೀಸೆಲ್ ಬೆಲೆ ಲೀಟರ್‌ಗೆ 80.40 ರೂ. ಇದೆ ಎಂದು ಸರಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ ರವಿವಾರ ತಿಳಿಸಿದೆ.
ಇತರ ಮೆಟ್ರೋ ನಗರಗಳಾದ ಚೆನ್ನೈ,ಮುಂಬೈ ಹಾಗೂ ಕೋಲ್ಕತಾದಲ್ಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.