100 ಜನರಿಗೆ ಬರ್ತ್‌ಡೇ ಪಾರ್ಟಿ ನೀಡಿದ್ದ ಜ್ಯುವೆಲ್ಲರಿ ಮಾಲಕ ಕೋವಿಡ್‌ನಿಂದ ಮೃತ
Update: 2020-07-05 05:22 GMT
ಹೈದರಾಬಾದ್,ಜು.5: ಹೈದರಾಬಾದ್‌ನ ಪ್ರಮುಖ ಚಿನ್ನಾಭರಣದ ಅಂಗಡಿ ಮಾಲಕ ತನ್ನ ಜನ್ಮದಿನದ ನಿಮಿತ್ತ ಕನಿಷ್ಟ 100 ಜನರಿಗೆ ಬರ್ತ್‌ಡೇ ಪಾರ್ಟಿ ನೀಡಿದ್ದರು. ಆದರೆ,ಮಾಲಕ ಶನಿವಾರ ಕೋವಿಡ್-19ಗೆ ಮೃತಪಟ್ಟಿದ್ದು, ಪಾರ್ಟಿಯಲ್ಲಿ ಪಾಲ್ಗೊಂಡವರಿಗೆ ಭಾರೀ ಆತಂಕ ಉಂಟಾಗಿದ್ದು, ನಗರದ ಖಾಸಗಿ ಲ್ಯಾಬ್‌ನಲ್ಲಿ ಸ್ವತಃ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.
ಪಾರ್ಟಿಯಲ್ಲಿ ಭಾಗವಹಿಸಿದ್ದ ಮತ್ತೊಂದು ಪ್ರಮುಖ ಚಿನ್ನಾಭರಣ ಅಂಗಡಿ ಮಾಲಕ ಕೂಡ ಶನಿವಾರವೇ ಕೋವಿಡ್-19ಕ್ಕೆ ಮೃತಪಟ್ಟಿದ್ದರು. ಜ್ಯುವೆಲ್ಲರಿ ಅಸೋಸಿಯೇಶನ್‌ನ ಕನಿಷ್ಟ 100 ಸದಸ್ಯರುಗಳು ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಪಾರ್ಟಿಯನ್ನು ಆಯೋಜಿಸಿದ್ದ ಮಾಲಕನಿಗೆ ಪಾರ್ಟಿ ನಡೆದ ಎರಡು ದಿನಗಳ ಬಳಿಕ ಕೋವಿಡ್-19 ಲಕ್ಷಣ ಕಾಣಿಸಿಕೊಂಡಿದ್ದು,ತಕ್ಷಣವೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆರೋಗ್ಯ ಅಧಿಕಾರಿಗಳು ಇದೀಗ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.