ಕೊರೋನಗೆ ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತ ಏಮ್ಸ್ ಆಸ್ಪತ್ರೆಯ 4ನೆ ಮಹಡಿಯಿಂದ ಹಾರಿ ಆತ್ಮಹತ್ಯೆ
Update: 2020-07-06 18:04 GMT
ಹೊಸದಿಲ್ಲಿ: ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 37 ವರ್ಷದ ಕೊರೋನ ಸೋಂಕಿತ ಪತ್ರಕರ್ತ ಆಸ್ಪತ್ರೆಯ 4ನೆ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುಗೆ ಕರೆದೊಯ್ಯಲಾಯಿತಾದರೂ ಗಂಭೀರ ಗಾಯಗಳಿಂದಾಗಿ ಅವರು ಕೊನೆಯುಸಿರೆಳೆದರು.
ಆತ್ಮಹತ್ಯೆಗೆ ಶರಣಾದ ಪತ್ರಕರ್ತನನ್ನು ತರುಣ್ ಸಿಸೋಡಿಯಾ ಎಂದು ಗುರುತಿಸಲಾಗಿದ್ದು, ಹಿಂದಿ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ತಾನು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯಿಂದ ಓಡಿ ಹೋದ ತರುಣ್ , ಅಲ್ಲಿಂದ ಸಿಬ್ಬಂದಿ ತಡೆಯಲು ಯತ್ನಿಸಿದರೂ ಅವರಿಂದ ತಪ್ಪಿಸಿ ಕಟ್ಟಡದಿಂದ ಧುಮುಕಿ ಆತ್ಮಹತ್ಯೆಗೆ ಶರಣಾದರು ಎಂದು ಏಮ್ಸ್ ಪ್ರಕಟನೆಯಲ್ಲಿ ತಿಳಿಸಿದೆ.