ವಿಕಾಸ್ ದುಬೆ ಎನ್ ಕೌಂಟರ್: ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಈ 2 ವಿಡಿಯೋಗಳು

Update: 2020-07-10 07:34 GMT

ಹೊಸದಿಲ್ಲಿ: ಕಾನ್ಪುರ್ ನಲ್ಲಿ ಇತ್ತೀಚೆಗೆ ಎಂಟು ಪೊಲೀಸರ ಹತ್ಯೆಗೆ ಕಾರಣನಾದ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯನ್ನು ಪೊಲೀಸರು ಇಂದು ಬೆಳಗ್ಗೆ  ಮಧ್ಯ ಪ್ರದೇಶದಿಂದ ಉತ್ತರಪ್ರದೇಶದ ಕಾನ್ಪುರಕ್ಕೆ ಕರೆತರುವ ವೇಳೆಗೆ ಎನ್‍ ಕೌಂಟರ್ ನಲ್ಲಿ ಹತ್ಯೆಗೈದಿದ್ದಾರೆ. ಈ  ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಆತನನ್ನು ಕರೆತರಲಾಗುತ್ತಿದ್ದ ವಾಹನ ಮಳೆಯಿಂದಾಗಿ ಉರುಳಿ ಬಿದ್ದ ನಂತರ ಆತ ಪೊಲೀಸರ ಬಂದೂಕನ್ನು ಸೆಳೆದು ಗುಂಡು ಹಾರಿಸಿ ತಪ್ಪಿಸಲೆತ್ನಿಸಿದಾಗ ಎನ್‍ ಕೌಂಟರ್ ನಲ್ಲಿ ಸಾಯಿಸಲಾಯಿತು  ಎಂಬುದು ಪೊಲೀಸರ ವಾದವಾಗಿದ್ದರೂ ಈ ಕುರಿತಂತೆ ಹರಿದಾಡುತ್ತಿರುವ ಎರಡು ವೀಡಿಯೋಗಳು ಬೇರೇನನ್ನೋ ಹೇಳುತ್ತಿವೆ.

► ವಿಕಾಸ್ ದುಬೆಯಿದ್ದ ಹಾಗೂ ಬೆಂಗಾವಲು ಪೊಲೀಸರಿದ್ದ ಮೂರು ಕಾರುಗಳು ಟೋಲ್ ಬೂತ್ ಒಂದರಿಂದ  ಬೆಳಿಗ್ಗೆ 4 ಗಂಟೆ ಸುಮಾರಿಗೆ ಹಾದು ಹೋಗುವಾಗ ವಿಕಾಸ್ ದುಬೆ ಬೇರೊಂದು ಕಾರಿನಲ್ಲಿದ್ದ ಹಾಗೂ ನಂತರ ಉರುಳಿ ಬಿದ್ದ ಕಾರಿನಲ್ಲಲ್ಲ ಎಂದು ತಿಳಿಯುತ್ತದೆ.  ಆತನನ್ನು ಇನ್ನೊಂದು ಕಾರಿನಲ್ಲಿ ಮತ್ತೆ ಕುಳ್ಳಿರಿಸಲಾಗಿತ್ತೇ ಎಂಬ ಬಗ್ಗೆ ಪೊಲೀಸರಿನ್ನೂ ಏನನ್ನೂ ಹೇಳಿಲ್ಲ.

► ಎನ್‍ ಕೌಂಟರ್ ನಡೆಯುವುದಕ್ಕಿಂತ ಅರ್ಧ ಗಂಟೆ ಮೊದಲು ಸುಮಾರು 6.30ರ ಹೊತ್ತಿಗಿನ ಇನ್ನೊಂದು  ವೀಡಿಯೋದಲ್ಲಿ ಪೊಲೀಸ್ ವಾಹನಗಳ ಹಿಂದಿನಿಂದ ಸಾಗುತ್ತಿದ್ದ ಪತ್ರಕರ್ತರ ಕಾರುಗಳನ್ನು ಪೊಲೀಸರು ತಡೆಯುತ್ತಿರುವುದು ಕಾಣಿಸುತ್ತದೆ. ಪೊಲೀಸರು ಮಾಧ್ಯಮ ಮಂದಿಯ ವಾಹನಗಳನ್ನು ಕಾನ್ಪುರ್‍ ನ ಸಚೆಂದ್ರಿ ಪ್ರದೇಶ ಸಮೀಪ ಆಗ ತಡೆದಿದ್ದರು.

► ವಿಕಾಸ್ ದುಬೆಗೆ ರಕ್ಷಣೆ ಕೋರಿ ಕಳೆದ ರಾತ್ರಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ಅಪೀಲೊಂದು ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎನ್‍ ಕೌಂಟರ್ ಗಳ ಕುರಿತಂತೆ ಸಿಬಿಐ ತನಿಖೆಗೆ ಆಗ್ರಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

► ಸ್ಥಳದಲ್ಲಿ ಬಂದೂಕಿನ ಶಬ್ದಗಳು ಕೇಳಿ ಬಂದವು. ಆದರೆ ನಾವು ಅತ್ತ ನಡೆದಾಗ ಪೊಲೀಸರು ನಮಗೆ ದೂರ ಹೋಗುವಂತೆ ಹೇಳಿದರು ಎಂದು ದಾರಿಹೋಕರೊಬ್ಬರು ಹೇಳಿದ್ದಾರೆ.

►60 ಪ್ರಕರಣಗಳಿರುವ ಆರೋಪಿಯೊಬ್ಬನಿಗೆ ಕೈಕೋಳಗಳನ್ನು ಯಾಕೆ ಹಾಕಿರಲಿಲ್ಲ? ಎನ್ನುವ ಪ್ರಶ್ನೆಯೂ ಇದೆ. ಏಕೆಂದರೆ ಕಾರು ಪಲ್ಟಿಯಾದಾಗ ವಿಕಾಸ್ ದುಬೆ ಗನ್ ಕದ್ದು , ಕಾರಿನ ಮೇಲೆ ಹತ್ತಿ ಓಡಲು ನೋಡಿದ ಎಂದು ಪೊಲೀಸರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News