ಅಶೋಕ್ ಗೆಹ್ಲೋಟ್ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಮಿತ್ರ ಪಕ್ಷ
Update: 2020-07-13 16:32 GMT
ಹೊಸದಿಲ್ಲಿ: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರಕಾರದಿಂದ ಬೆಂಬಲ ಹಿಂದಕ್ಕೆ ಪಡೆಯುವುದಾಗಿ ಮಿತ್ರ ಪಕ್ಷವೊಂದು ಹೇಳಿದೆ. ಆದರೆ ಪಕ್ಷದ ಇಬ್ಬರು ಶಾಸಕರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್ ನಡುವಿನ ಮನಸ್ತಾಪ ರಾಜಸ್ಥಾನ ಸರಕಾರವನ್ನು ಉರುಳಿಸುವ ಹಂತಕ್ಕೆ ಬಂದಿದೆ.
ಒಂದು ವೇಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆದರೆ ತನ್ನ ಪಕ್ಷವು ತಟಸ್ಥವಾಗಿ ನಿಲ್ಲಲಿದೆ ಎಂದು ಭಾರತೀಯ ಟ್ರೈಬಲ್ ಪಾರ್ಟಿ ನಾಯಕ ಮಹೇಶ್ ಭಾಯ್ ವಾಸವ ಹೇಳಿದ್ದಾರೆ. ವಿಶ್ವಾಸಮತ ಯಾಚನೆ ವೇಳೆ ಗೈರಾಗಬೇಕು ಎಂದು ಪಕ್ಷದ ಶಾಸಕರಿಗೆ ಅವರು ಸೂಚಿಸಿದ್ದಾರೆ.