‘ಆಹಾರಕ್ಕಾಗಿ ನಮಗೆ ರೈತರು ಬೇಕಾಗಿಲ್ಲ’ ಎಂದವನಿಗೆ ತಿರುಗೇಟು ನೀಡಿ ಟ್ವಿಟರಿಗರ ಮನಗೆದ್ದ ಸ್ವಿಗ್ಗಿ
ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ವಿರೋಧಿಸುತ್ತಿರುವವರಿಗೆ ಆಹಾರ ವಿತರಣಾ ಮೊಬೈಲ್ ಆ್ಯಪ್ ತಕ್ಕ ಪ್ರತಿಕ್ರಿಯೆ ನೀಡುವ ಮೂಲಕ ರೈತರ ಪ್ರತಿಭಟನೆ ಕುರಿತ ಚರ್ಚೆಯೊಂದಿಗೆ ಕೈಜೋಡಿಸಿದೆ.
ಕಳೆದ ಕೆಲವು ದಿನಗಳಿಂದ ದಿಲ್ಲಿಯತ್ತ ಮೆರವಣಿಗೆಯಲ್ಲಿ ಬಂದಿರುವ ಸಾವಿರಾರು ರೈತರು ದಿಲ್ಲಿ-ಹರ್ಯಾಣ ಗಡಿಯಲ್ಲಿ ಒಟ್ಟು ಸೇರಿದ್ದಾರೆ. ಸಾಮಾಜಿಕ ಮಾಧ್ಯಮ ಹಾಗೂ ಟಿವಿ ಸ್ಟುಡಿಯೊಗಳ ಒಳಗೆ ಬಿಜೆಪಿ ಬೆಂಬಲಿಗರು ಪ್ರತಿಭಟನಾ ಆಂದೋಲನದಲ್ಲಿ ಭಾಗವಹಿಸಿರುವವರನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ.
"ರೈತರುಗಳ ಪ್ರತಿಭಟನೆಯ ಕುರಿತು ನನ್ನ ಸ್ನೇಹಿತನೊಂದಿಗೆ ವಾಗ್ವಾದ ನಡೆಸಿದಾಗ ನಾವು ಆಹಾರಕ್ಕಾಗಿ ರೈತರುಗಳನ್ನು ಅವಲಂಬಿಸಿಲ್ಲ ಎಂದು ಆತ ಹೇಳಿದ. ನಾವು ಯಾವಾಗಲೂ ಸ್ವಿಗ್ಗಿಯಿಂದ ಆಹಾರವನ್ನು ಆರ್ಡರ್ ಮಾಡಬಹುದು ಎಂದು ಆತ ಹೇಳಿದ. ಆತ ಗೆದ್ದ" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.
ಸ್ವಿಗ್ಗಿ ಈ ಟ್ವೀಟ್ ಗೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ಉತ್ತರಿಸುತ್ತಾ, sorry, we cannot refund education ಎಂದು ಟ್ವೀಟ್ ಮಾಡಿದ್ದು, ರೈತರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿರುವವರ ಬೌದ್ಧಿಕ ಮಟ್ಟವನ್ನು ವ್ಯಂಗ್ಯವಾಡಿದೆ.
ಸ್ವಿಗ್ಗಿಯ ಚಮತ್ಕಾರಿ ಪ್ರತಿಕ್ರಿಯೆಯು ಎಲ್ಲರ ಹೃದಯಗಳನ್ನು ಗೆದ್ದಿದೆ.
'ಈಗ ಭಕ್ತರು ಸ್ವಿಗ್ಗಿಯನ್ನು ಬಹಿಷ್ಕರಿಸುತ್ತಾರೆ' ಎಂದು ಓರ್ವ ಟ್ವೀಟಿಸಿದರು.
'ಎಂತಹ ಸುಂದರವಾದ ಟ್ವೀಟ್. ಇದಕ್ಕಾಗಿ ನಾವು ನಿಮ್ಮನ್ನು ಪ್ರೀತಿಸುತ್ತೇವೆ' ಎಂದು ಇನ್ನೋರ್ವ ಟ್ವಿಟರ್ ಬಳಕೆದಾರ ಬರೆದಿದ್ದಾರೆ.