ಯುಎಇ: ಸರಕಾರಿ ಉದ್ಯೋಗಿಗಳಿಗೆ 7 ದಿನಕ್ಕೊಮ್ಮೆ ಕೊರೋನ ಪರೀಕ್ಷೆ

Update: 2021-01-18 18:12 GMT

ದುಬೈ (ಯುಎಇ), ಜ. 18: ಯುಎಇಯ ಸಚಿವಾಲಯಗಳು ಮತ್ತು ಕೇಂದ್ರ ಸರಕಾರದ ಇಲಾಖೆಗಳ ಎಲ್ಲ ಉದ್ಯೋಗಿಗಳು ಪ್ರತಿ 7 ದಿನಗಳಿಗೊಮ್ಮೆ ಕೊರೋನ ವೈರಸ್ ಪತ್ತೆಹಚ್ಚುವ ಪಿಸಿಆರ್ ಪರೀಕ್ಷೆಗೆ ಒಳಪಡಬೇಕಾಗಿದೆ.

ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟುವ ಉದ್ದೇಶದ ನೂತನ ನೀತಿಯನ್ನು ಕೇಂದ್ರ ಮಾನವ ಸಂಪನ್ಮೂಲಗಳ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.

ಈಗಾಗಲೇ ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಸ್ವೀಕರಿಸಿರುವ ಉದ್ಯೋಗಿಗಳಿಗೆ ಈ ಪರೀಕ್ಷೆಯಿಂದ ವಿನಾಯಿತಿಯಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಈ ಹಿಂದೆ, ಕೇಂದ್ರ ಸರಕಾರದ ಎಲ್ಲ ಉದ್ಯೋಗಿಗಳು ಪ್ರತಿ 14 ದಿನಗಳಿಗೊಮ್ಮೆ ತಮ್ಮದೇ ವೆಚ್ಚದಲ್ಲಿ ಪಿಸಿಆರ್ ಪರೀಕ್ಷೆಗೆ ಒಳಪಡಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News