ಕೊರೋನ: ಒಂದು ವಾರ ಒಮಾನ್ ಗಡಿ ಬಂದ್

Update: 2021-01-18 18:14 GMT

ಮಸ್ಕತ್ (ಒಮಾನ್), ಜ. 18: ಕೊರೋನ ವೈರಸ್ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯುವುದಕ್ಕಾಗಿ ಸೋಮವಾರದಿಂದ ಒಂದು ವಾರದ ಅವಧಿಗೆ ಒಮಾನ್ ತನ್ನ ಭೂ ಗಡಿಗಳನ್ನು ಮುಚ್ಚಲಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ಒಎನ್‌ಎ ರವಿವಾರ ತಿಳಿಸಿದೆ.

ಈ ಕ್ರಮವು ಸೋಮವಾರ ಸಂಜೆ 6 ಗಂಟೆಯಿಂದ ಜಾರಿಗೆ ಬಂದಿದ್ದು, ಅಗತ್ಯ ಬಿದ್ದರೆ ಗಡಿ ಮುಚ್ಚುಗಡೆಯನ್ನು ನಿಗದಿತ ಅವಧಿಗೂ ಮೀರಿ ವಿಸ್ತರಿಸಬಹುದಾಗಿದೆ ಎಂದು ದೇಶದ ಕೊರೋನ ವೈರಸ್ ತುರ್ತು ಸಮಿತಿಯ ನಿರ್ಧಾರವೊಂದನ್ನು ಉಲ್ಲೇಖಿಸಿ ಒಎನ್‌ಎ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News