ದೋಹಾ: ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ರಕ್ತದಾನ ಶಿಬಿರ

Update: 2021-01-21 06:52 GMT

ದೋಹಾ : ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್ ಆಶ್ರಯದಲ್ಲಿ 12ನೇ ವಾರ್ಷಿಕ ರಕ್ತದಾನ ಅಭಿಯಾನ ದೋಹಾದ ಹಮದ್ ಮೆಡಿಕಲ್ ಕಾರ್ಪೊರೇಷನ್‍ನ ಬ್ಲಡ್ ಡೋನರ್ ಸೆಂಟರ್ ನಲ್ಲಿ ಇತ್ತೀಚೆಗೆ ನಡೆಯಿತು.

ಭಾರತೀಯ ರಾಯಭಾರ ಕಚೇರಿ, ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್, ಹೈಲ್ಯಾಂಡ್ ಇಸ್ಲಾಮಿಕ್ ಫೋರಂ, ಕತರ್ ಹಾಗೂ ಫ್ಯಾಮಿಲಿ ಫ್ರೆಂಡ್ಸ್ ಸರ್ಕಲ್ ಸಹಯೋಗದೊಂದಿಗೆ ಆಯೋಜಿಸಲಾಯಿತು.

ಈ ಸಂದರ್ಭ ನಡೆದ ರಕ್ತದಾನ ಶಿಬಿರದಲ್ಲಿ 69 ಮಂದಿ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ `ಸರ್ಟಿಫೈಡ್ ಲೈಫ್ ಸೇವರ್' ಪ್ರಮಾಣಪತ್ರವನ್ನು ಸಂಘಟಕ ಸಂಸ್ಥೆಗಳ ವತಿಯಿಂದ ನೀಡಲಾಯಿತು.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಫಯಾಝ್ ಅಹ್ಮದ್, ಕತರ್ ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಫಸ್ಟ್ ಸೆಕ್ರಟರಿ ಎಸ್.ಆರ್.ಎಚ್. ಫಹ್ಮಿ, ಐಸಿಸಿ ಅಧ್ಯಕ್ಷ ಬಾಬು ರಾಜನ್, ಐಸಿಬಿಎಫ್ ಅಧ್ಯಕ್ಷ ಝಿಯಾದ್ ಉಸ್ಮಾನ್ ಮತ್ತಿತರರು ಹಾಜರಿದ್ದರು.

ರಕ್ತದಾನದ ಮಹತ್ವವನ್ನು ಇಲೈಟ್ ಮೆಡಿಕಲ್ ಸೆಂಟರ್ ನ ಡಾ. ರಜೀತ್ ಶೆಟ್ಟಿ ವಿವರಿಸಿದರು. ಕತರ್ ನಲ್ಲಿ  ಬಹಳಷ್ಟು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ದಿವಾಕರ್ ಪೂಜಾರಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಈ ಸಂದರ್ಭ ರವಿಶೆಟ್ಟಿ, ಎಟಿಎಸ್ ಅಬ್ದುಲ್ಲಾ ಮೋನು, ಇಬ್ರಾಹಿಂ, ಅಹ್ಮದ್ ಸಯೀದ್ ಅಸ್ಸಾದಿ, ಸಾಕಿಬ್ ರಝಾ ಖಾನ್, ಶುಹೈಬ್ ಅಹ್ಮದ್, ಮುಹಮ್ಮದ್ ಯೂನುಸ್, ಇಸ್ಮಾಯಿಲ್ ಅಬೂಬಕರ್, ಶಕೀಲ್, ಸುಹೈಮ್ ಖಲೀಲ್, ಸೈಯದ್ ಕಾಸಿಮ್, ಮಹೇಶ್ ಗೌಡ, ದಿವಾಕರ್ ಪೂಜಾರಿ, ಸುಬ್ರಹ್ಮಣ್ಯ, ನಾಗೇಶ್ ರಾವ್, ದೀಪಕ್ ಶೆಟ್ಟಿ, ಚೈತಾಲಿ ಶೆಟ್ಟಿ, ಸುನಿಲ್ ಡಿಸಿಲ್ವಾ, ರಘು ಅಂಚನ್, ನಝೀರ್ ಪಾಷಾ, ರಿಝ್ವಾನ್ ಅಹ್ಮದ್, ಜಾವೇದ್ ಶರೀಫ್ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News