ಖತರ್‌ನಲ್ಲಿ ಸೌದಿ ರಾಯಭಾರ ಕಚೇರಿ ‘ಕೆಲವೇ ದಿನಗಳಲ್ಲಿ’ ಪುನರಾರಂಭ: ಸೌದಿ ವಿದೇಶ ಸಚಿವ
ರಿಯಾದ್ (ಸೌದಿ ಅರೇಬಿಯ), ಜ. 22: ಸೌದಿ ಅರೇಬಿಯವು ‘ಕೆಲವೇ ದಿನಗಳಲ್ಲಿ’ ಖತರ್‌ನಲ್ಲಿನ ತನ್ನ ರಾಯಭಾರ ಕಚೇರಿಯನ್ನು ಮರುತೆರೆಯುವುದು ಎಂದು ಸೌದಿ ಅರೇಬಿಯದ ವಿದೇಶ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಹೇಳಿದ್ದಾರೆ.
ಸೌದಿ ಅರೇಬಿಯವು ಖತರ್ ರಾಜಧಾನಿ ದೋಹಾದಲ್ಲಿರುವ ತನ್ನ ರಾಯಭಾರ ಕಚೇರಿಗೆ ಶೀಘ್ರದಲ್ಲೇ ರಾಯಭಾರಿಯನ್ನೂ ಕಳುಹಿಸಲಿದೆ.
‘‘ಖತರ್ ಜೊತೆಗೆ ರಾಜಿಯಾಗುವ ಮಹತ್ವವನ್ನು ಎಲ್ಲ ನಾಲ್ಕು ದೇಶಗಳು ಮನಗಂಡಿವೆ’’ ಎಂದು ವಿದೇಶ ಸಚಿವರನ್ನು ಉಲ್ಲೇಖಿಸಿ ‘ಅಲ್-ಅರೇಬಿಯ’ ಪತ್ರಿಕೆ ವರದಿ ಮಾಡಿದೆ.
ಖತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು 2017 ಜೂನ್‌ನಲ್ಲಿ ಆ ದೇಶದೊಂದಿಗಿನ ರಾಜತಾಂತ್ರಿಕ, ವ್ಯಾಪಾರ ಸಂಬಂಧ ಸೇರಿದಂತೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿದ್ದವು.
ಸೌದಿ ಅರೇಬಿಯವು ಖತರ್‌ಗೆ ಈಗಾಗಲೇ ತನ್ನ ವಾಯುಪ್ರದೇಶ ಹಾಗೂ ಸಮುದ್ರ ಮತ್ತು ಭೂಗಡಿಗಳನ್ನು ಮರು ತೆರೆದಿದೆ. ವಾಣಿಜ್ಯ ವಿಮಾನಗಳು ಜನವರಿ 14ರಿಂದ ಎರಡು ದೇಶಗಳ ನಡುವೆ ಹಾರಾಡುತ್ತಿದೆ.