ಸೌದಿ ಅರೇಬಿಯ: ಕೋಸ್ಟಲ್ ಕರ್ನಾಟಕ ಫ್ರೆಂಡ್ಸ್ ನಿಂದ ಎಚ್.ಎಂ.ಆರ್. ಕ್ರಿಕೆಟ್ ಪಂದ್ಯಾಟ

Update: 2021-02-01 08:39 GMT

ಸೌದಿ ಅರೇಬಿಯ, ಫೆ.1: ಕೋಸ್ಟಲ್ ಕರ್ನಾಟಕ ಫ್ರೆಂಡ್ಸ್ ವತಿಯಿಂದ ಇತ್ತೀಚೆಗೆ ಜುಬೈಲ್ ನಲ್ಲಿ ಆಯೋಜಿಸಿದ್ದ ಎಚ್.ಎಂ.ಆರ್. ಚಾಂಪಿಯನ್ಸ್ ಟ್ರೋಫಿ-2021 ಕ್ರಿಕೆಟ್ ಪಂದ್ಯಾಟದಲ್ಲಿ ಎಚ್.ಎಂ.ಆರ್. ತಂಡ ಪ್ರಶಸ್ತಿ ಜಯಿಸಿದೆ.

ಒಟ್ಟು 16  ತಂಡಗಳು ಭಾಗವಹಿಸಿದ್ದ ಪಂದ್ಯಾಟದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಎಚ್.ಎಂ.ಆರ್. ತಂಡವು ಸೌದಿ ಮಾಝ್ ತಂಡವನ್ನು ಸೋಲಿಸಿದರೆ, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಜುಬೈಲ್ ಫ್ರೆಂಡ್ಸ್ ತಂಡವು ಫ್ರೆಂಡ್ಸ್ ಕ್ಲಬ್ ಅಡ್ಡೂರು ತಂಡದೆದುರು ಗೆಲುವಿನ ನಗೆ ಬೀರಿತು. ಬಳಿಕ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಎಚ್.ಎಂ.ಆರ್. ತಂಡವು ಜುಬೈಲ್ ಫ್ರೆಂಡ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಚವನ್ನು ತನ್ನದಾಗಿಸಿಕೊಂಡಿತು.

ಪಂದ್ಯಾಕೂಟದ ಮೊದಲು ನಡೆದ ಎಚ್.ಎಂ.ಆರ್. ತಂಡದ ಜೆರ್ಸಿ ಬಿಡುಗಡೆಗೊಳಿಸಲಾಯಿತು.

ಸಮಾರಂಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಕಾರ್ಯನಿರ್ವಾಹಕರಾದ ನೌಫಲ್ ಬಜ್ಪೆ, ಹಫೀಝ್ ಇಸ್ಮಾಯೀಲ್, ಜುನೈದ್ ಆಂಪ್ಲಿಟ್ಯೂಡ್, ಎಂ.ಎನ್.ಜಿ. ಫೌಂಡೇಶನ್ ಸದಸ್ಯ ಇಂಝಮಾಮ್, ಹುಸೈನ್ ಮೋನು,  ಎಚ್.ಎಂ.ಆರ್. ತಂಡದ ಕಪ್ತಾನ ರಾಝಿಕ್ ಕರ್ನಿರೆ, ಇಸ್ಮಾಯೀಲ್  ಹಾಗೂ ಪಂದ್ಯಾಕೂಟದ ಆಯೋಜಕರಾದ ಅನ್ಸಾರ್ ಉಚ್ಚಿಲ, ದಾವೂದ್ ಹಕೀಂ ಸೂರಿಂಜೆ ಉಪಸ್ಥಿತರಿದ್ದರು. ಜೆರ್ಸಿಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು, ಎಂ.ಎನ್.ಜಿ. ಫೌಂಡೇಶನ್ ಹಾಗೂ ಡೌರಿ ಫ್ರೀ ನಿಖಾಹ್ ಹೆಲ್ಪ್ ಲೈನ್ ಲೋಗೊ ಅಚ್ಚು ಹಾಕಲಾಗಿದೆ.

ವರದಿ: ನೌಶಾದ್ ಕಲಂದರ್ ಕರ್ನಿರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News