ಸೌದಿ: ಭಾರತ ಸೇರಿ 20 ದೇಶಗಳ ಜನರಿಗೆ ತಾತ್ಕಾಲಿಕ ನಿಷೇಧ
Update: 2021-02-12 04:43 GMT
ರಿಯಾದ್ (ಸೌದಿ ಅರೇಬಿಯ), ಫೆ. 11: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಭಾರತ ಸೇರಿದಂತೆ 20 ದೇಶಗಳಿಂದ ಜನರು ಸೌದಿ ಅರೇಬಿಯಕ್ಕೆ ಆಗಮಿಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
‘‘ಭಾರತ ಸೇರಿದಂತೆ ಈ ಕೆಳಗಿನ 20 ದೇಶಗಳಿಂದ ಜನರು ಸೌದಿ ಅರೇಬಿಯಕ್ಕೆ ಬರುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದು ಎಂಬುದಾಗಿ ಫೆಬ್ರವರಿ 2ರ ಸುತ್ತೋಲೆಯಲ್ಲಿ ಸೌದಿ ಅರೇಬಿಯ ತಿಳಿಸಿದೆ ಎಂದು ಸೌದಿ ಅರೇಬಿಯದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ನಿಷೇಧ ಪಟ್ಟಿಯಲ್ಲಿರುವ ದೇಶಗಳೆಂದರೆ ಭಾರತ, ಅರ್ಜೆಂಟೀನ, ಯುನೈಟೆಡ್ ಅರಬ್ ಎಮಿರೇಟ್ಸ್, ಜರ್ಮನಿ, ಅಮೆರಿಕ, ಇಂಡೋನೇಶ್ಯ, ಐರ್‌ಲ್ಯಾಂಡ್, ಇಟಲಿ, ಪಾಕಿಸ್ತಾನ, ಬ್ರೆಝಿಲ್, ಪೋರ್ಚುಗಲ್, ಬ್ರಿಟನ್, ಟರ್ಕಿ, ದಕ್ಷಿಣ ಆಫ್ರಿಕ, ಸ್ವೀಡನ್, ಸ್ವಿಟ್ಸರ್‌ಲ್ಯಾಂಡ್, ಫ್ರಾನ್ಸ್, ಲೆಬನಾನ್, ಈಜಿಪ್ಟ್ ಮತ್ತು ಜಪಾನ್.