ಕರ್ನಾಟಕ ಸಂಘ ಶಾರ್ಜಾ: ನೂತನ ಅಧ್ಯಕ್ಷರಾಗಿ ಎಂ.ಇ.ಮೂಳೂರ್ ಅಧಿಕಾರ ಸ್ವೀಕಾರ
ಶಾರ್ಜಾ: ಶಾರ್ಜಾ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಎಂ.ಇ.ಮೂಳೂರ್ ಅಧಿಕಾರ ಸ್ವೀಕರಿಸಿದರು. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಶಾರ್ಜಾ ಕರ್ನಾಟಕ ಸಂಘ 18 ವರ್ಷಗಳಿಂದ ಕನ್ನಡ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಕಳೆದ ಅವದಿಯಲ್ಲಿ ಅಧ್ಯಕ್ಷರಾಗಿದ್ದ ಆನಂದ್ ಬೈಲೂರ್ ಮತ್ತು ಕಾರ್ಯಕಾರಿ ಸಮಿತಿಯ ಬೀಳ್ಕೊಡುಗೆ ಹಾಗೂ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಇತ್ತೀಚೆಗೆ ನಡೆಯಿತು.
ನೂತನ ಅಧ್ಯಕ್ಷರಾಗಿ ಎಂ.ಇ.ಮೂಳೂರ್, ಉಪಾಧ್ಯಕ್ಷರಾಗಿ ನೋವೆಲ್ ಡಿ ಅಲ್ಮೆಡಾ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ್ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಅಮರ್ ಉಮೇಶ್ ನಂತೂರ್ ಹಾಗೂ ಖಜಾಂಚಿಯಾಗಿ ಮಹಮ್ಮದ್ ಅಬ್ರಾರ್ ಉಲ್ಲಾ ಶರೀಫ್ ಜವಬ್ಧಾರಿಯನ್ನು ವಹಿಸಿಕೊಂಡರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ಶಾರ್ಜಾದ ಪೋಷಕ ಮಾರ್ಕ್ ಡೆನಿಸ್ ಮಾತನಾಡಿ, ಸಂಘಟನೆಗೆ ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಅನಂದ ಬೈಲೂರ್ ತಮ್ಮ ಸಮಿತಿಯ ಪರವಾಗಿ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿ, ತಮ್ಮ ಅವಧಿಯ ಲೆಕ್ಕಚಾರವನ್ನು ಸಭೆಯಲ್ಲಿ ಖಜಾಂಚಿ ಸುಗಂಧರಾಜ್ ಬೇಕಲ್ ಅವರ ಮೂಲಕ ಮಂಡಿಸಿದರು.
ಸಲಹೆಗಾರ ಸತೀಶ್ ಪೂಜಾರಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಸಲಹೆಗಾರಾರದ ಪ್ರವೀಣ್ ಕುಮಾರ ಶೆಟ್ಟಿ, ಬಿ. ಕೆ. ಗಣೇಶ್ ರೈ, ಶ್ರೀ ಹರೀಶ್ ಶೇರಿಗಾರ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಬ್ದುಲ್ ರಝಾಕ್, ಕಿರಣ್ ಶೆಟ್ಟಿ ನೂತನ ಕಾರ್ಯಕಾರಿ ಸಮಿತಿಗೆ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಹಾರೈಸಿದರು.
ಸುಗಂಧರಾಜ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.