ರಿಯಾದ್ ಮೇಲೆ ಹುದಿ ಕ್ಷಿಪಣಿ ದಾಳಿ ಯತ್ನ ವಿಫಲ
Update: 2021-02-28 15:53 GMT
ರಿಯಾದ್,ಫೆ.28:ಯೆಮನ್‌ನ ಹುದಿ ಬಂಡುಕೋರರು ಶನಿವಾರ ರಿಯಾದ್ ಮೇಲೆ ನಡೆಸಿದ ಕ್ಷಿಪಣಿ ದಾಳಿಯನ್ನು ಸೌದಿ ಆರೇಬಿಯ ನೇತೃತ್ವದ ಸೇನಾ ಮೈತ್ರಿಕೂಟವು ವಿಫಲಗೊಳಿಸಿದೆ.
ಇರಾನ್ ಬೆಂಬಲಿತ ಹುದಿ ಬಂಡುಕೋರರು, ಸೌದಿ ಬೆಂಬಲಿತ ಯೆಮನ್ ಸರಕಾರದ ಕಟ್ಟಕಡೆಯ ಉತ್ತರದ ಭದ್ರಕೋಟೆಯಾ ಮಾರಿಬ್ ಮೇಲೆ ತಮ್ಮ ದಾಳಿಯನ್ನು ತೀವ್ರಗೊಳಿಸಿರುವ ಸಂದರ್ಭದಲ್ಲೇ ಈ ಕ್ಷಿಪಣಿ ದಾಳಿ ನಡೆದಿದೆ.
ರಿಯಾದ್ ಅನ್ನು ಗುರಿಯಾಗಿರಿಸಿ ಹುದಿ ಬಂಡುಕೋರರು ಉಡಾಯಿಸಿದ ಪ್ರಕ್ಷೇಪಕ ಕ್ಷಿಪಣಿಯನ್ನು ತಾನು ಅಡ್ಡಗಟ್ಟಿ ಹೊಡೆದುರುಳಿಸಿರುವುದಾಗಿ ಸೌದಿ ನೇತೃತ್ವದ ಸೇನಾ ಮೈತ್ರಿಕೂಟ ತಿಳಿಸಿದೆ. ಕ್ಷಿಪಣಿಯನ್ನು ಹೊಡೆದುರುಳಿಸಿದ ಸಂದರ್ಭದಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಕ್ಷಿಪಣಿಅವಶೇಷಗಳು ರಿಯಾದ್‌ನ ವಸತಿಪ್ರದೇಶಗಳ ಮೇಲೆ ಬಿದ್ದಿರುವುದಾಗಿ ವರದಿಗಳು ತಿಳಿಸಿವೆ.