ಮಲ್ನಾಡ್ ಗಲ್ಫ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನೋಂದಾವಣೆ, ಲಾಂಛನ ಬಿಡುಗಡೆ
ಮಂಗಳೂರು : ಮಲ್ನಾಡ್ ಗಲ್ಫ್ ಅಸೋಸಿಯೇಶನ್ ಇದೀಗ ಮಲ್ನಾಡ್ ಗಲ್ಫ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಎಂದು ನೋಂದಾವಣೆಗೊಂಡಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ನೂತನ ಲಾಂಛನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮಲ್ನಾಡ್ ಗಲ್ಫ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಶರೀಫ್ ಶಮ್ಕೋನ್ ಕಳಸ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯು ಒಳಗೊಳ್ಳುವ ಮೌಲ್ಯಗಳನ್ನು ಸಾರುವಂತೆ ಲಾಂಛನವನ್ನು ತಯಾರಿಸಲಾಗಿದ್ದು, ಸಂಸ್ಥೆಯ ಎಲ್ಲ ಕೇಂದ್ರ ಸಮಿತಿ ಪದಾಧಿಕಾರಿಗಳ ಒಮ್ಮತದೊಂದಿಗೆ ಲಾಂಛನ ಬಿಡುಗಡೆ ಮಾಡಲಾಯಿತು.
ಲಾಂಛನದಲ್ಲಿರುವ ಪರ್ವತಗಳ ಶ್ರೇಣಿಯು ಮಲ್ನಾಡ್ ಗಲ್ಫ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನ ಉನ್ನತ ಗುರಿಯನ್ನು ಮತ್ತು ಮಲೆನಾಡಿನ ಪರಂಪರೆಯನ್ನು ಸೂಚಿಸುತ್ತದೆ. ಪುಸ್ತಕ ಮತ್ತು ಕೈ ಶಿಕ್ಷಣ ಹಾಗೂ ಸೇವಾ ಕಾರ್ಯವನ್ನು ಸೂಚಿಸುತ್ತದೆ. ಖರ್ಜೂರದ ಮರಗಳು ಗಲ್ಫ್ ಅನ್ನು ಪ್ರತಿನಿಧಿಸುತ್ತದೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.