ದುಬೈ ಉಪ ಆಡಳಿತಗಾರ, ಹಣಕಾಸು ಸಚಿವ ಶೇಖ್‌ ಹಮ್ದಾನ್‌ ಬಿನ್‌ ರಾಶಿದ್‌ ಅಲ್‌ ಮಕ್ತೂಮ್‌ ನಿಧನ

Update: 2021-03-24 16:35 GMT
photo: gulfnews

ದುಬೈ (ಯುಎಇ), ಮಾ. 24: ಯುಎಇಯ ಏಳು ಎಮಿರೇಟ್‌ಗಳಲ್ಲಿ ಒಂದಾಗಿರುವ ದುಬೈನ ಉಪ ಆಡಳಿತಗಾರ ಶೇಖ್ ಹಮ್ದಾನ್ ಬಿನ್ ರಶೀದ್ ಅಲ್ ಮಕ್ತೂಮ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಯುಎಇಯ ಹಣಕಾಸು ಸಚಿವರೂ ಆಗಿರುವ ಶೇಖ್ ಹಮ್ದಾನ್ ದುಬೈಯ ಹಾಲಿ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್‌ರ ಸಹೋದರ.

ಬುಧವಾರ ಶೇಖ್ ಮುಹಮ್ಮದ್ ತನ್ನ ಸಹೋದರನ ಚಿತ್ರವೊಂದನ್ನು ಟ್ವೀಟ್ ಮಾಡಿ: ‘‘ನಾವು ದೇವರಿಗೆ ಸೇರಿದವರು ಹಾಗೂ ನಾವು ಅಲ್ಲಿಗೆ ವಾಪಸಾಗುತ್ತೇವೆ. ನನ್ನ ಶಕ್ತಿ ಮತ್ತು ನನ್ನ ಒಡನಾಡಿಯಾಗಿದ್ದ ನಿನ್ನ ಮೇಲೆ ದೇವರ ಕೃಪೆ ಇರಲಿ, ಸಹೋದರ’’ ಎಂದು ಬರೆದಿದ್ದಾರೆ.

1971ರಲ್ಲಿ ಯುಎಇಯ ಸ್ಥಾಪನೆಯಾದಾಗಿನಿಂದಲೂ ಅವರು ಹಣಕಾಸು ಸಚಿವರ ಹುದ್ದೆಯನ್ನು ನಿಭಾಯಿಸುತ್ತಾ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News