ಯುಎಇ: ‘ಗೋಲ್ಡನ್ ರೆಸೆಡೆನ್ಸಿ’ ಅರ್ಜಿದಾರರಿಗೆ 6 ತಿಂಗಳ ವೀಸಾ ಜಾರಿಗೆ

Update: 2021-04-02 17:26 GMT

ಅಬುಧಾಬಿ (ಯುಎಇ), ಎ. 2: ‘ಗೋಲ್ಡನ್ ರೆಸೆಡೆನ್ಸಿ ವೀಸಾ’ಗೆ ಅರ್ಜಿ ಹಾಕಿದವರಿಗೆ ಹಲವು ಬಾರಿ ಯುಎಇ ಪ್ರವೇಶಕ್ಕೆ ಅವಕಾಶ ನೀಡುವ ಆರು ತಿಂಗಳ ವಾಯಿದೆಯುಳ್ಳ ವೀಸಾ ನೀಡಲು ಅನುವು ಮಾಡಿಕೊಡುವ ಸೇವೆಯೊಂದನ್ನು ಯುಎಇಯ ಕೇಂದ್ರೀಯ ಗುರುತು ಮತ್ತು ಪೌರತ್ವ ಪ್ರಾಧಿಕಾರ ಆರಂಭಿಸಿದೆ.

ಗೋಲ್ಡನ್ ರೆಸಿಡೆನ್ಸಿಗೆ ಅಗತ್ಯವಿರುವ ಎಲ್ಲ ವಿಧಿವಿಧಾನಗಳನ್ನು ಪೂರೈಸಲು ಈ ವೀಸಾವು ಅರ್ಜಿದಾರರಿಗೆ ಅವಕಾಶ ನೀಡುತ್ತದೆ. ಮುಖ್ಯವಾಗಿ ನಿರಂತರವಾಗಿ ಪ್ರಯಾಣಿಸುವವರಿಗೆ ಈ ವೀಸಾವು ಲಾಭದಾಯಕವಾಗಿರುತ್ತದೆ.

ಆರು ತಿಂಗಳ ಅವಧಿಯ ವೀಸಾ ಶುಲ್ಕ 1,150 ದಿರ್ಹಮ್ (ಸುಮಾರು 22,950 ರೂಪಾಯಿ) ಆಗಿದ್ದು, ಒಮ್ಮೆ ನವೀಕರಿಸಬಹುದಾಗಿದೆ.

ಈ ಆರು ತಿಂಗಳ ಅವಧಿಯ ವೀಸಾವು ಗೋಲ್ಡನ್ ವೀಸಾ ವಿಧಿವಿಧಾನಗಳನ್ನು ಪೂರೈಸುವ ಉದ್ದೇಶಕ್ಕೆ ಮಾತ್ರವಾಗಿದೆ.

ಸಾರ್ವಜನಿಕ ಅಥವಾ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಹೂಡಿಕೆದಾರರು, ಉದ್ಯಮಿಗಳು, ವೈದ್ಯರು, ವಿಜ್ಞಾನಿಗಳು, ಸಂಶೋಧಕರು, ಪಿಎಚ್‌ಡಿ ಪದವೀಧರರು, ಕ್ರೀಡಾಪಟುಗಳು, ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರಗಳಲ್ಲಿನ ಸಾಧಕರು ಮಾತ್ರ ಈ 6 ತಿಂಗಳ ವೀಸಾ ಪಡೆಯಲು ಅರ್ಹರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News