ಒಮಾನ್: ನಾಗರಿಕರು, ನಿವಾಸಿಗಳಿಗೆ ಮಾತ್ರ ದೇಶ ಪ್ರವೇಶಕ್ಕೆ ಅವಕಾಶ

Update: 2021-04-06 07:32 GMT

ಮಸ್ಕತ್ (ಒಮಾನ್), ಎ. 5: ಒಮಾನ್‌ನಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಪ್ರಿಲ್ 8ರಿಂದ ನಾಗರಿಕರು ಮತ್ತು ನಿವಾಸಿಗಳಿಗೆ ಮಾತ್ರ ದೇಶ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಒಮಾನ್‌ನ ಕೊರೋನ ವೈರಸ್ ನಿಗಾ ಸಮಿತಿ ಸೋಮವಾರ ತಿಳಿಸಿದೆ.

ಎಲ್ಲ ವಾಣಿಜ್ಯ ಚಟುವಟಿಕೆಗಳ ಮೇಲಿನ ‘ರಾತ್ರಿ ನಿಷೇಧ’ವನ್ನು ರಮಝಾನ್ ತಿಂಗಳ ಮುಕ್ತಾಯದವರೆಗೂ ವಿಸ್ತರಿಸಲಾಗುವುದು ಎಂದು ಸಮಿತಿ ಹೇಳಿದೆ.

ವಾಹನಗಳ ಓಡಾಟ ಮತ್ತು ರಸ್ತೆಗಳಲ್ಲಿ ಜನರ ಓಡಾಟವನ್ನು ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನಿಷೇಧಿಸುವ ಆದೇಶ ಮಾರ್ಚ್ 28ರಂದು ಜಾರಿಗೆ ಬಂದಿತ್ತು. ಅದನ್ನು ನಿಗದಿಯಂತೆ ಎಪ್ರಿಲ್ 8ರಂದು ತೆರವುಗೊಳಿಸಲಾಗುವುದು. ಆದರೆ, ರಮಝಾನ್ ತಿಂಗಳ ಅವಧಿಯಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 4 ಗಂಟೆಯವರೆಗೆ ಮತ್ತೆ ಕರ್ಫ್ಯೂ ವಿಧಿಸಲಾಗುವುದು ಎಂದು ಸರಕಾರಿ ಮಾಧ್ಯಮದಲ್ಲಿ ಪ್ರಕಟಗೊಂಡ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News