ಎಪ್ರಿಲ್ 25ರಿಂದ 10 ದಿನಗಳ ಕಾಲ ಭಾರತ-ದುಬೈ ವಿಮಾನ ಯಾನ ಸ್ಥಗಿತಗೊಳಿಸಿದ ಎಮಿರೇಟ್ಸ್

Update: 2021-04-22 14:51 GMT

ದುಬೈ: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಪ್ರಿಲ್ 25ರಿಂದ 10 ದಿನಗಳ ಕಾಲ ದುಬೈ ಹಾಗೂ ಭಾರತದ ನಡುವಿನ ವಿಮಾನ ಯಾನವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಮಿರೇಟ್ಸ್ ವಿಮಾನ ಯಾನ ಸಂಸ್ಥೆ ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಳೆದ 14 ದಿನಗಳಲ್ಲಿ ಭಾರತದಲ್ಲಿ ಸಂಚರಿಸಿರುವ ಪ್ರಯಾಣಿಕರಿಗೆ ಯುಎಇಗೆ ಬರಲು ಅನುಮತಿ ಇಲ್ಲ ಎಂದು ಸ್ಥಳೀಯ ದೈನಿಕ ಗಲ್ಫ್ ನ್ಯೂಸ್ ವರದಿ ಮಾಡಿದೆ.

 10 ದಿನಗಳ ಬಳಿಕ ನಿರ್ಧಾರವನ್ನು ಪರಿಶೀಲಿಸಲಾಗುವುದು ಎಂದು ವರದಿಯಾಗಿದೆ.

ಈಗಾಗಲೇ ಹಲವು ದೇಶಗಳು ಭಾರತದಿಂದ ಬರುವ ವಿಮಾನಗಳಿಗೆ ನಿಷೇಧವನ್ನು ಘೋಷಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News