ಅಸ್ಸಾಂ, ಬಂಗಾಳದಲ್ಲಿ 6.4 ತೀವ್ರತೆಯ ಭೂಕಂಪನ: ರಸ್ತೆ, ಕಟ್ಟಡಗಳಲ್ಲಿ ಬಿರುಕು

Update: 2021-04-28 06:17 GMT
 (Photo:India Today)

ಹೊಸದಿಲ್ಲಿ: ಈಶಾನ್ಯ ರಾಜ್ಯಗಳಲ್ಲಿ ಬುಧವಾರ ಬೆಳಗ್ಗೆ 6.4 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ಅಸ್ಸಾಂ ಹಾಗೂ ಬಂಗಾಳದಲ್ಲಿ ವ್ಯಾಪಕ ಹಾನಿಯಾಗಿದೆ.

ಬೆಳಗ್ಗೆ 7:15ಕ್ಕೆ ಸೋನಿತ್ ಪುರ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ್ದು, ಮೇಘಾಲಯ ಹಾಗೂ ಪಶ್ಚಿಮಬಂಗಾಳದ ಉತ್ತರ ಭಾಗಗಳು ಸೇರಿದಂತೆ ಇಡೀ ಪ್ರದೇಶದಲ್ಲಿ ನಡುಕ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ಹೆಚ್ಚಿನ ತೀವ್ರತೆಯ ಭೂಕಂಪನದಿಂದಾಗಿ ಅಸ್ಸಾಂನ ಹಲವಾರು ಸ್ಥಳಗಳಲ್ಲಿರಸ್ತೆಗಳಲ್ಲಿ ಬಿರುಕು ಬಿಟ್ಟಿದ್ದು, ಮನೆಗಳು ಹಾಗೂ ಕಟ್ಟಡಗಳಿಗೆ ಹಾನಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಯಾವುದೇ ಗಾಯ ಅಥವಾ ಸಾವು ಸಂಭವಿಸಿದ ಕುರಿತು ವರದಿಯಾಗಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿರುವ ಫೋಟೊಗಳು ಹಾಗೂ ವೀಡಿಯೋಗಳು ಅಸ್ಸಾಂನಲ್ಲಿಸಂಭವಿಸಿದ ಭೂಕಂಪದಿಂದ ಎಷ್ಟು ಹಾನಿಯಾಗಿದೆ ಎನ್ನುವುದನ್ನು ತೋರಿಸುತ್ತಿವೆ.

ಇದೇ ವೇಳೆ, ರಾಜ್ಯವು ಭೂಕಂಪನಕ್ಕೊಳಗಾದ ನಂತರ ಕೇಂದ್ರ ಸರಕಾರದಿಂದ ಅಸ್ಸಾಂಗೆ  ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News