ಕೊರೋನ ಅವಧಿಯಲ್ಲಿ ಯುಎಇಯಿಂದ ಭಾರತಕ್ಕೆ ಹಣ ವರ್ಗಾವಣೆ ಪ್ರಮಾಣ ಏರಿಕೆ

Update: 2021-04-28 16:30 GMT

ದುಬೈ (ಯುಎಇ), ಎ. 28: ಕೋವಿಡ್-19 ಎರಡನೇ ಅಲೆಯು ಭಾರತವನ್ನು ಆಕ್ರಮಿಸಿದ ಬಳಿಕ ಯುಎಇಯಿಂದ ಭಾರತಕ್ಕೆ ವರ್ಗಾವಣೆಯಾಗುತ್ತಿರುವ ಹಣದ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಈ ಸಂಕಷ್ಟದ ಸಮಯದಲ್ಲಿ ಭಾರತೀಯರು ಯುಎಇಯಲ್ಲಿ ಕೆಲಸ ಮಾಡವು ಅನಿವಾಸಿ ಭಾರತೀಯರನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.

ಅದೂ ಅಲ್ಲದೆ, ಯುಎಇಯಲ್ಲಿರುವ ಕೆಲವು ಹಣ ವಿನಿಮಯ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿಯ ಪಿಎಮ್ ಕೇರ್ಸ್‌ ಫಂಡ್‌ಗೆ ಕಳುಹಿಸಲಾಗುವ ದೇಣಿಗೆಗಳ ಮೇಲಿನ ಶುಲ್ಕವನ್ನೂ ಮನ್ನಾ ಮಾಡುತ್ತಿವೆ.

ಭಾರತದ ಹೊಸ ಕೊರೋನ ವೈರಸ್ ಅಲೆಯ ಸಂದರ್ಭದಲ್ಲಿ ನಮ್ಮ ಭಾರತೀಯ ಗ್ರಾಹಕರು ತಮ್ಮ ಕುಟುಂಬಗಳಿಗೆ ಕಳುಹಿಸುತ್ತಿರುವ ಹಣದ ಪ್ರಮಾಣದಲ್ಲಿ ಗಮನಾರ್ಹ ಏರಿಕೆಯಾಗಿದೆ. ಕೊರೋನ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ನೀಡುವ ಪಿಎಮ್ ಕೇರ್ಸ್‌ ಫಂಡ್‌ಗೆ ಕಳುಹಿಸಲಾಗುತ್ತಿರುವ ದೇಣಿಗೆಗಳ ಎಲ್ಲ ಶುಲ್ಕಗಳನ್ನು ಮನ್ನಾ ಮಾಡುವುದಾಗಿ ನಾವು ಕಳೆದ ಕೆಲವು ದಿನಗಳಿಂದ ಘೋಷಿಸುತ್ತಾ ಬಂದಿದ್ದೇವೆ ಎಂದು ಅಲ್-ಫರ್ದನ್ ಎಕ್ಸ್‌ಚೇಂಜ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಸನ್ ಫರ್ದನ್ ಅಲ್ ಫರ್ದನ್ ‘ಖಲೀಜ್ ಟೈಮ್ಸ್‌’ ಗೆ ತಿಳಿಸಿದ್ದಾರೆ.

ಪ್ರಸಕ್ತ ಕೊರೋನ ವೈರಸ್ ದಾಳಿಯ ಅವಧಿಯಲ್ಲಿ ಭಾರತೀಯರು ಸ್ವದೇಶದಲ್ಲಿರುವ ತಮ್ಮ ಸಂಬಂಧಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಕಳುಹಿಸುತ್ತಿದ್ದಾರೆ ಎಂದು ಅಲ್ ಅನ್ಸಾರಿ ಎಕ್ಸ್‌ಚೇಂಜ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಶೀದ್ ಎ. ಅಲ್ ಅನ್ಸಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News