ನಂ.1 ಸ್ತಾನಕ್ಕೇರಿದ ನ್ಯೂಝಿಲ್ಯಾಂಡ್ ತಂಡ

Update: 2021-05-03 18:53 GMT

ದುಬೈ: ಏಕದಿನ ಅಂತರ್‌ರಾಷ್ಟ್ರೀಯ ಏಕದಿನ ರ್ಯಾಂಕಿಂಗ್‌ನಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಹಿಂದಕ್ಕೆ ತಳ್ಳಿರುವ ನ್ಯೂಝಿಲ್ಯಾಂಡ್ ತಂಡ ಪ್ರಥಮ ಸ್ಥಾನಕ್ಕೇರಿದೆ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರ ತಿಳಿಸಿದೆ.

  50 ಓವರ್‌ಗಳ ಕ್ರಿಕೆಟ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿರುವ ಇಂಗ್ಲೆಂಡ್ ತಂಡ ಟ್ವೆಂಟಿ-20 ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.

 ಕಳೆದ ಮೂರು ವರ್ಷಗಳಲ್ಲಿ ಪೂರ್ಣಗೊಂಡ 30 ಏಕದಿನ ಪಂದ್ಯಗಳಲ್ಲಿ 20 ರಲ್ಲಿ ಜಯಗಳಿಸಿರುವ ನ್ಯೂಝಿಲ್ಯಾಂಡ್ ತಂಡ ವಿಶ್ವಕಪ್ ರನ್ನರ್ಸ್ ಅಪ್ ಆಗಿದ್ದು, ಶ್ರೇಯಾಂಕದಲ್ಲಿ ಎರಡು ಸ್ಥಾನಗಳ ಭಡ್ತಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News