ಚೆನ್ನೈ-ರಾಜಸ್ಥಾನ ನಡುವಿನ ಬುಧವಾರದ ಐಪಿಎಲ್ ಪಂದ್ಯ ಮರು ನಿಗದಿ

Update: 2021-05-04 06:04 GMT

ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ ನ ಇಡೀ ತಂಡವು ಐಸೋಲೇಶನ್ ನಲ್ಲಿದ್ದು ಹೀಗಾಗಿ ಚೆನ್ನೈ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಬುಧವಾರ ನಡೆಯಬೇಕಾಗಿದ್ದ ಐಪಿಎಲ್ ಪಂದ್ಯವನ್ನು ಮರು ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಗೆ ಕೊರೋನ ಸೋಂಕು ದೃಢಪಟ್ಟ ನಂತರ ತಂಡದ ಆಟಗಾರರನ್ನು ಕಠಿಣ ಕ್ವಾರಂಟನ್ ಗೆ ಒಳಪಡಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. 

 ಐಪಿಎಲ್ ನಲ್ಲಿ ಮರು ನಿಗದಿಪಡಿಸಿದ ಎರಡನೇ ಪಂದ್ಯ ಇದಾಗಿದೆ. ಕೋಲ್ಕತಾ ನೈಟ್ ರೈಡರ್ಸ್‍ನ ಇಬ್ಬರು ಆಟಗಾರರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಬಳಿಕ ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವನ್ನು ಮುಂದೂಡಲಾಗಿತ್ತು. ಕೆಕೆಆರ್ ನ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಗೆ ಕೊರೋನ ಪಾಸಿಟಿವ್ ಆಗಿದ್ದು, ಇಬ್ಬರನ್ನೂ ತಂಡದಿಂದ ಪ್ರತ್ಯೇಕಗೊಳಿಸಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೇ 1ರಂದು ಮುಂಬೈ ಇಂಡಿಯನ್ಸ್ ವಿರುದ್ದ ಕೊನೆಯ ಬಾರಿ ಆಡಿತ್ತು.ರಾಜಸ್ಥಾನ ತಂಡ ಮೇ 2ರಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ದ ಕೊನೆಯ ಪಂದ್ಯ ಆಡಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News