ಇಂದಿನಿಂದ ವಿದೇಶಿ ಆಟಗಾರರು ತವರಿಗೆ ಪ್ರಯಾಣ
Update: 2021-05-05 04:57 GMT
ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡ ಬಳಿಕ ವಿದೇಶಿ ಆಟಗಾರರು ಬುಧವಾರದಿಂದ ಮನೆಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟ್ವೆಂಟಿ -20 ಪಂದ್ಯಾವಳಿಯನ್ನು ಮಂಗಳವಾರ ಅನಿರ್ದಿಷ್ಟವಾಗಿ ಅಮಾನತುಗೊಳಿಸಿದ ನಂತರ ಹಲವು ಮಂದಿ ವಿದೇಶಿ ಆಟಗಾರರು ಸ್ವದೇಶಕ್ಕೆ ಮರಳಲು ತಯಾರಿ ನಡೆಸುತ್ತಿದ್ದಾರೆ.