ತಂಡದ ಎಲ್ಲಾ ಸದಸ್ಯರು ಮನೆಗೆ ಮರಳಿದ ಬಳಿಕವೇ ನಾನು ಹೋಟೆಲ್ ಬಿಟ್ಟು ತೆರಳುತ್ತೇನೆ: ಮಹೇಂದ್ರ ಸಿಂಗ್ ಧೋನಿ
Update: 2021-05-06 12:50 GMT
ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಧೋನಿ ಅವರು ತಮ್ಮ ತಂಡದ ವಿದೇಶಿ ಹಾಗೂ ಸ್ವದೇಶಿ ಆಟಗಾರರೆಲ್ಲಾ ದಿಲ್ಲಿಯಿಂದ ತಮ್ಮ ಮನೆಗಳಿಗೆ ಹಿಂದಿರುಗಿದ ನಂತರವಷ್ಟೇ ತಾವು ತಮ್ಮ ಮನೆಗೆ ಮರಳುವುದಾಗಿ ಹೇಳಿದ್ದಾರೆ.
ಐಪಿಎಲ್ ನಮ್ಮ ದೇಶದಲ್ಲಾಗುತ್ತಿರುವುದರಿಂದ ವಿದೇಶಿ ಆಟಗಾರರು ಹಾಗೂ ಅವರ ಸಿಬ್ಬಂದಿ ಮೊದಲು ತಮ್ಮ ಸ್ವದೇಶಕ್ಕೆ ಮರಳಬೇಕು, ನಂತರ ಭಾರತೀಯ ಆಟಗಾರರು ಮರಳಬೇಕು ಎಂದು ತಾವು ಬಯಸುವುದಾಗಿ ತಂಡದ ಸದಸ್ಯರ ಜತೆಗೆ ನಡೆದ ವರ್ಚುವಲ್ ಸಭೆಯಲ್ಲಿ ತಿಳಿಸಿದ್ದಾರೆ.
"ಹೋಟೆಲ್‍ನಿಂದ ಹೊರಡುವ ಕೊನೆಯ ವ್ಯಕ್ತಿ ತಾವು ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ" ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ತನ್ನ ಆಟಗಾರರಿಗೆ ದಿಲ್ಲಿಯಿಂದ ವಿಶೇಷ ವಿಮಾನದ ಏರ್ಪಾಟು ಮಾಡಿದೆ.