ಎ.ಪಿ. ಅಬೂಬಕರ್ ಮುಸ್ಲಿಯಾರ್ ರಿಗೆ ಫುಜೈರ ಹೋಲಿ ಕುರ್‌ಆನ್ ಅಂತರ್‌ರಾಷ್ಟ್ರೀಯ ವ್ಯಕ್ತಿತ್ವ ಪುರಸ್ಕಾರ
ಕಲ್ಲಿಕೋಟೆ, ಮೇ 6: ಫುಜೈರ ಹೋಲಿ ಕುರ್‌ಆನ್ ಅಂತರ್‌ರಾಷ್ಟ್ರೀಯ ವ್ಯಕ್ತಿತ್ವ ಪುರಸ್ಕಾರಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಪಾತ್ರರಾಗಿದ್ದಾರೆ.
ಯುಎಇಯ ಫುಜೈರಾದ ಕಲ್ಚರಲ್ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಎಫ್ಎಸ್ಸಿಎ ಅಧ್ಯಕ್ಷ ಹೆಚ್.ಇ.ಖಾಲಿದ್ ಅಲ್ ದನ್ಹಾನಿ ಅವರ ಸಮ್ಮುಖದಲ್ಲಿ, ಫುಜೈರಾ ರಾಯಲ್ ಫ್ಯಾಮಿಲಿ ಸದಸ್ಯ ಶೇಖ್ ಅಬ್ದುಲ್ಲಾ ಬಿನ್ ಹಮದ್ ಬಿನ್ ಸೈಫ್ ಅಲ್ ಶಾರ್ಕಿ ಅವರಿಂದ ಎ.ಪಿ. ಅಬೂಬಕರ್ ಮುಸ್ಲಿಯಾರ್ ಪ್ರಶಸ್ತಿ ಸ್ವೀಕರಿಸಿದರು.
ಶಿಕ್ಷಣ, ಶಾಂತಿ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಭಾರತ ಮತ್ತು ಯುಎಇ ನಡುವಿನ ಸೌಹಾರ್ಧತೆ ಸದೃಢಗೊಳಿಸಲು ಕಳೆದ 50 ವರ್ಷಗಳ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
It was an auspicious moment to receive the Fujairah Holy Quran International Islamic Personality Award from HH Sheikh...
Posted by Sheikh Abubakr Ahmad الشيخ أبوبكر أحمد on Wednesday, 5 May 2021