ಟ್ವಿಟರ್ ನಲ್ಲಿ ತನ್ನ ಸಾವಿನ ಕುರಿತ ವದಂತಿಗೆ ಹಾಸ್ಯದ ದಾಟಿಯಲ್ಲಿ ಪ್ರತಿಕ್ರಿಯಿಸಿದ ನಟ ಪರೇಶ್ ರಾವಲ್
ಹೊಸದಿಲ್ಲಿ: ನಟ ಪರೇಶ್ ರಾವಲ್ ಅವರು ತಮ್ಮ ಸಾವಿನ ಕುರಿತಾದ ವದಂತಿಗೆ ಶುಕ್ರವಾರ ಹಾಸ್ಯದ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಟ್ವಿಟರ್ ಬಳಕೆದಾರರು ಪರೇಶ್ ರಾವಲ್ ಅವರ ಚಿತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು, ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ನಟ ಪರೇಶ್ ರಾವಲ್ ನಿಧನರಾದರು ಎಂದು ಬರೆದಿದ್ದರು.
65 ವರ್ಷದ ನಟ ತನ್ನ ಸಾವಿನ ಸುಳ್ಳು ಸುದ್ದಿಗೆ ತಮಾಷೆಯಾಗಿ ಪ್ರತಿಕ್ರಿಯಿಸಿ ಹೀಗೆ ಬರೆದಿದ್ದಾರೆ:
"ನಾನು ಬೆಳಿಗ್ಗೆ 7 ಗಂಟೆಗೆ ಮಲಗಿದ್ದೆ. ಹೀಗಾಗಿ ತಪ್ಪು ತಿಳುವಳಿಕೆಗಾಗಿ ಕ್ಷಮಿಸಿ" ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
. "ಇಂತಹ ಟ್ವೀಟ್‌ಗಳಿಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಈ ದಿನಗಳಲ್ಲಿ ನಾವು ಭಾವನಾತ್ಮಕವಾಗಿ ತುಂಬಾ ದುರ್ಬಲರಾಗಿದ್ದೇವೆ, ಅಂತಹ ಸುಳ್ಳು ಸುದ್ದಿಗಳು ಮಾರಕವಾಗಬಹುದು. ದೇವರು ನಿಮಗೆ ದೀರ್ಘಾಯುಷ್ಯವನ್ನು ನೀಡುತ್ತಾನೆ ಸರ್" ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ, ಇನ್ನೊಬ್ಬರು "ದೇವರು ನಿಮಗೆ ದೀರ್ಘಕಾಲ ಆಶೀರ್ವದಿಸಲಿ ಸರ್’’ ಎಂದು ಬರೆದಿದ್ದಾರೆ.
ಸೆಲೆಬ್ರಿಟಿ ಸಾವಿನ ಬಗ್ಗೆ ಸುಳ್ಳು ವದಂತಿ ಹಬ್ಬಿರುವುದು ಇದು ಮೊದಲ ಬಾರಿಗೆ ಅಲ್ಲ. ಈ ವಾರದ ಆರಂಭದಲ್ಲಿ, ಟಿವಿ ನಟ ಮುಖೇಶ್ ಖನ್ನಾ ಅವರು ತಮ್ಮ ಸಾವಿನ ಬಗ್ಗೆ ಸುಳ್ಳು ವದಂತಿಗಳನ್ನು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಅಲ್ಲಗಳೆದಿದ್ದರು. ‘ಶಕ್ತಿಮಾನ್ ‘ ಖ್ಯಾತಿಯ ನಟ ತನ್ನ ಸಾವಿನ ವದಂತಿಗಳನ್ನು ನಿರಾಕರಿಸಲು ಸ್ವತಃ ವೀಡಿಯೊವನ್ನು ಹಂಚಿಕೊಂಡಿದ್ದರು . "ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ" ಎಂದು ಮುಖೇಶ್ ಖನ್ನಾ ವೀಡಿಯೊದಲ್ಲಿ ಹೇಳಿದ್ದರು.
ಹಿಂದಿ ಚಿತ್ರರಂಗದ ಹಿರಿಯ ನಟರಲ್ಲಿ ಪರೇಶ್ ರಾವಲ್ ಒಬ್ಬರು. ಅವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. . ಹಂಗಮಾ, ಹೇರಾ ಫೆರಿ, ಓ ಮೈ ಗಾಡ್, ವೆಲ್ಕಮ್ ಮತ್ತು ಸಂಜು ಚಿತ್ರಗಳಲ್ಲಿ ನಟಿಸಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರನ್ನು ರಾಷ್ಟ್ರೀಯ ಶಾಲೆಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.