ಜೂನ್‌ 30ರವರೆಗೆ ಭಾರತ-ಯುಎಇ ವಿಮಾನ ಪ್ರಯಾಣ ನಿಷೇಧ ಮುಂದುವರಿಕೆ: ಎಮಿರೇಟ್ಸ್‌

Update: 2021-05-30 13:49 GMT
Photo: Emirates

ಭಾರತದಿಂದ ಯುಎಇಗೆ ಪ್ರಯಾಣಿಕರ ವಿಮಾನ ಹಾರಾಟ ಅಮಾನತುಗೊಳಿಸುವುದನ್ನು ಜೂನ್ 30 ರವರೆಗೆ ಎಮಿರೇಟ್ಸ್ ವಿಸ್ತರಿಸಿದೆ ಎಂದು ವಿಮಾನಯಾನ ಸಂಸ್ಥೆ ರವಿವಾರ ತಿಳಿಸಿದೆ.

"ಇದಲ್ಲದೆ, ಕಳೆದ 14 ದಿನಗಳಲ್ಲಿ ಭಾರತದ ಮೂಲಕ ಸಾಗಿದ ಪ್ರಯಾಣಿಕರನ್ನು ಬೇರೆ ಯಾವುದೇ ಸ್ಥಳದಿಂದ ಯುಎಇಗೆ ಪ್ರಯಾಣಿಸಲು ಅನುಮತಿ ನೀಡುವುದಿಲ್ಲ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಯುಎಇ ಪ್ರಜೆಗಳು, ಯುಎಇ ಗೋಲ್ಡನ್ ವೀಸಾಗಳನ್ನು ಹೊಂದಿರುವವರು, ಪರಿಷ್ಕೃತ ಕೋವಿಡ್ 19 ಪ್ರೋಟೋಕಾಲ್ಗಳನ್ನು ಅನುಸರಿಸುವ ರಾಜತಾಂತ್ರಿಕ ಕಾರ್ಯಾಚರಣೆಗಳ ಸದಸ್ಯರ ಪ್ರಯಾಣಕ್ಕೆ ವಿನಾಯಿತಿ ನೀಡಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ರದ್ದಾದ ಬುಕಿಂಗ್‌ಗಾಗಿ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಎರಡು ಆಯ್ಕೆಗಳನ್ನು ನೀಡಿದೆ. ಮುಂದಿನ ವಿಮಾನಕ್ಕಾಗಿ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಇರಿಸಿಕೊಳ್ಳುವ ಆಯ್ಕೆ ಮಾಡಬಹುದು. ಅಗತ್ಯ ಮಾಹಿತಿಗಾಗಿ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾಗಿ khaleejtimes ವರದಿ ಮಾಡಿದೆ.

ಎರಡನೆಯ ಆಯ್ಕೆ, ವಿಮಾನವನ್ನು ಪರ್ಯಾಯ ದಿನಾಂಕಕ್ಕಾಗಿ ಮರು ಬುಕ್ ಮಾಡುವುದು, ಇದಕ್ಕಾಗಿ ಪ್ರಯಾಣಿಕರು ಆಯಾ ಟ್ರಾವೆಲ್ ಏಜೆಂಟ್ ಅಥವಾ ಬುಕಿಂಗ್ ಕಚೇರಿಯನ್ನು ಸಂಪರ್ಕಿಸುವಂತೆ ವಿಮಾನಯಾನ ಸಂಸ್ಥೆ ಶಿಫಾರಸು ಮಾಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News