ಯುಎಇ: 2,127 ಕೊರೋನ ಪ್ರಕರಣಗಳು: 4 ಸಾವು

Update: 2021-06-15 17:29 GMT

ದುಬೈ (ಯುಎಇ), ಜೂ. 15: ಕಳೆದ 24 ಗಂಟೆತಗಳ ಅವಧಿಒಯಲ್ಲಿ 2,127 ಕೊರೋನ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಯುಎಇಯ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಇದೇ ಅವಧಿಯಲ್ಲಿ 2,094 ಮಂದಿ ಚೇತರಿಸಿಕೊಂಡಿದ್ದಾರೆ ಹಾಗೂ ನಾಲ್ವರು ಮೃತಪಟ್ಟಿದ್ದಾರೆ.


ಇದರೊಂದಿಗೆ ಯುಎಇಯಲ್ಲಿ ದಾಖಲಾಗಿರುವ ಒಟ್ಟು ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 6,01,950ಕ್ಕೆ ಏರಿದೆ. ಅದೇ ವೇಳೆ, 5,81,130 ಮಂದಿ ಚೇತರಿಸಿಕೊಂಡಿದ್ದಾರೆ. ಮೃತರ ಸಂಖ್ಯೆ 1,734ಕ್ಕೆ ಏರಿದೆ.

ಸಾರ್ವಜನಿಕ ಸ್ಥಳಗಳಿಗೆ ಹೋಗುವವರಿಗೆ ಹಸಿರು ಪಾಸ್

ಅಬುಧಾಬಿಯಲ್ಲಿ ಇಂದಿನಿಂದ ಹೊಟೇಲ್ ಮತ್ತು ವಿರಾಮ ಸ್ಥಳಗಳು ಸೇರಿದಂತೆ ಹೆಚ್ಚಿನ ಸಾರ್ವಜನಿಕ ಸ್ಥಳಗಳಗೆ ಪ್ರವೇಶ ಪಡೆಯಬಯಸುವವರು ‘ಅಲ್ ಹುಸ್ನ್’ ಆ್ಯಪ್ನಲ್ಲಿ ಹಸಿರು ಪಾಸನ್ನು ಪ್ರದರ್ಶಿಸಬೇಕು.

ಗ್ರೀನ್ ಪಾಸ್ ವ್ಯವಸ್ಥೆಯನ್ನು ಸರಿಯಾಗಿ ಜಾರಿ ಮಾಡಲಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಲು ಇನ್ಸ್ಪೆಕ್ಟರ್‌ ಗಳು ಹೊಟೇಲ್ಗಳು ಮತ್ತು ಇತರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಎಂಬುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News