ಅಲೋಪಥಿ ಕುರಿತು ದಾರಿತಪ್ಪಿಸುವ ಹೇಳಿಕೆ: ರಾಮ್ ದೇವ್ ವಿರುದ್ಧ ಛತ್ತೀಸ್ ಗಢದಲ್ಲಿ ಪ್ರಕರಣ ದಾಖಲು
Update: 2021-06-17 08:44 GMT
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಯ ರಾಜ್ಯ ಘಟಕವು ನೀಡಿದ ದೂರಿನ ಮೇರೆಗೆ ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ ಹಾಗೂ ಛತ್ತೀಸ್ ಗಢ ಹಾಸ್ಪಿಟಲ್ ಬೋರ್ಡ್ ನ ಚೇರ್ ಮ್ಯಾನ್ ಡಾ. ರಾಕೇಶ್ ಗುಪ್ತಾ, ರಾಮ್ ದೇವ್ ವಿರುದ್ಧ ಭಾರತೀಯ ದಂಡಸಂಹಿತೆಯ ವಿಪತ್ತು ನಿರ್ವಹಣಾ ಕಾಯ್ದೆ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ದೂರನ್ನು ಪರಿಶೀಲಿಸಿದ ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂದು ರಾಯಪುರದ ಪೊಲೀಸ್ ಅಧಿಕಾರಿ ನಾಸರ್ ಸಿದ್ದೀಖಿ ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 186 (ಸಾರ್ವಜನಿಕ ಸೇವಕನನ್ನು ಕರ್ತವ್ಯಗಳಿಂದ ತಡೆಯುವುದು) ಸೆಕ್ಷನ್ 188 (ಅಧಿಕೃತವಾಗಿ ಜಾರಿಗೆ ಬರುವ ನಿಯಮಗಳನ್ನು ಪಾಲಿಸಲು ನಿರಾಕರಿಸುವುದು) 270 ಹಾಗೂ ಸೆಕ್ಷ್ 504ರ ಅಡಿಯಲ್ಲಿ ರಾಮ್ ದೇವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.