ರಾಮಮಂದಿರ ಟ್ರಸ್ಟ್‌ ನಿಂದ 8 ಕೋಟಿ ರೂ.ಗೆ ಇನ್ನೊಂದು ನಿವೇಶನ ಖರೀದಿ: ವರದಿ

Update: 2021-06-17 17:02 GMT
ಫೈಲ್ ಚಿತ್ರ 

ಅಯೋಧ್ಯೆ,ಜೂ.18: ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾರ್ಚ್ 18ರಂದು ಎರಡು ನಿವೇಶನಗಳನ್ನು 18.5 ಕೋಟಿ ರೂ. ಹಾಗೂ 8 ಕೋಟಿ ರೂ.ಗಳಿಗೆ ಪ್ರತ್ಯೇಕವಾಗಿ ಖರೀದಿಸಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಗುರುವಾರ ವರದಿ ಮಾಡಿದೆ.

 
1.208 ಹೆಕ್ಟೇರ್ ಹಾಗೂ 1.037 ಹೆಕ್ಟೇರ್ ವಿಸ್ತೀರ್ಣದ ಈ ಎರಡು ನಿವೇಶನಳು ಮೂಲತಃ ಹರೀಶ್ ಪಾಠಕ್ ಹಾಗೂ ಅವರ ಪತ್ನಿ ಕುಸುಮ್ ಪಾಠಕ್ ಎಂಬವರಿಗೆ ಸೇರಿದ್ದಾಗಿದ್ದವು.
       
1.208 ಹೆಕ್ಟೇರ್ ವಿಸ್ತೀರ್ಣದ ಜಮೀನಿನ ಅಧಿಕೃತ ಮೌಲ್ಯ 5.8 ಕೋಟಿ ರೂ. ಆಗಿದ್ದು ಅದನ್ನು ರಿಯಲ್ಎಸ್ಟೇಟ್ ಡೀಲರ್ಗಳಾದ ಸುಲ್ತಾನ್ ಅನ್ಸಾರಿ ಹಾಗೂ ರಿಯಲ್ ಎಸ್ಟೇಟ್ ಡೀಲರ್ ರವಿ ಮೋಹನ್ ತಿವಾರಿ ಅವರು ಪಾಠಕ್ರಿಂದ ಕೇವಲ 2 ಕೋಟಿ ರೂ.ಗೆ ಖರೀದಿಸಿದ್ದರು ಹಾಗೂ  ರಾಮಜನ್ಮಭೂಮಿ ಟ್ರಸ್ಟ್ ಈ ನಿವೇನವನ್ನು ಮಾರ್ಚ್ 18ರಂದು 18.5 ಕೋಟಿ ರೂ. ಕೊಟ್ಟು ಖರೀದಿಸಿದೆ ಆಮ್ ಆದ್ಮಿ ಪಕ್ಷ ಹಾಗೂ ಸಮಾಜವಾದಿ ಪಕ್ಷಗಳು ಆರೋಪಿಸಿದ್ದವು.  ʼನಿವೇಶನʼ ಖರೀದಿಯಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಭ್ರಷ್ಟಾಚಾರವೆಸಗಿರುವ ಆರೋಪದ ಬಗ್ಗೆ ತನಿಖೆಯಾಗಬೇಕೆಂದು ಅವು ಆಗ್ರಹಿಸಿವೆ.
    
1.037 ಹೆಕ್ಟೇರ್ ವಿಸ್ತೀರ್ಣದ ಬೇರೊಂದು ಸಣ್ಣ ನಿವೇಶನವನ್ನು ಕೂಡಾ ರಾಮಂದಿರ ಟ್ರಸ್ಟ್ ಪಾಠಕ್ರಿಂದ 8 ಕೋಟಿ ರೂ.ಗೆ ನೇರವಾಗಿ ಖರೀದಿಸಿದೆಯೆಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಈ ದಾಖಲೆಗಳು ಉತ್ತರಪ್ರದೇಶ ಸರಕಾರದ ಸಮಗ್ರ ಅಹವಾಲು ಪರಿಹಾರ ವ್ಯವಸ್ಥೆ ಕುರಿತಾದ ಅಧಿಕೃತ ಜಾಲತಾಣದಲ್ಲ ಲಭ್ಯವಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಇದೀಗ 1.208 ಎಕರೆ ಹಾಗೂ 1.037 ಎಕರೆ ವಿಸ್ತೀರ್ಣದ ಈ ಎರಡು ಎರಡು ತಂಡುನೆಲಗಳನ್ನು ಒಂದೇ ನಿವೇಶನವೆಂಬುದಾಗಿ ವೆಬ್ಸೈಟ್ ನಲ್ಲಿ ಗುರುತಿಸಲಾಗಿದೆ.
  
ಮೇ 11ರಂದು ರಾಮ ದೇವಾಲಯ ಟ್ರಸ್ಟ್ ತಾನು ಪಾಠಕ್ ರಿಂದ ನೇರವಾಗಿ ಖರೀದಿಸಿದ 1.037 ಹೆಕ್ಟೇರ್ ವಿಸ್ತೀರ್ಣದ ಜಮೀನಿನಲ್ಲಿ 695.678 ಚದರ ಮೀಟರ್ ಜಾಗವನ್ನು ಕೌಸಲ್ಯಾ ಭವನ್ ಟ್ರಸ್ಟ್ ನ ಯಶೋದಾ ನಂದನ್ ತ್ರಿಪಾಠಿ ಹಾಗೂ ಕೌಶಾಲ್ ಕಿಶೋರ್ ತ್ರಿಪಾಠಿ ಅವರಿಗೆ ಉಚಿತವಾಗಿ ನೀಡಿತ್ತು. ಈ ಎರಡು ನಿವೇಶನಗಳನ್ನು ಒಳಗೊಂಡ ಮೂರು ಮಾರಾಟ ಒಪ್ಪಂದಗಳಿಗೆ ಸಾಕ್ಷಿದಾರರು ಒಂದೇ ಆಗಿದ್ದರು. ರಾಮದೇವಾಲಯ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಹಾಗೂ ಅಯೋಧ್ಯಾ ಮೇಯರ್ ರಿಶಿಕೇಶ್ ಉಪಾಧ್ಯಾಯ ಮೂರು ಭೂವ್ಯವಹಾರ ಒಪ್ಪಂದಗಳಿಗೆ ಸಾಕ್ಷಿದಾರರಾಗಿದ್ದರು.
 
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖರೀದಿಸಿರುವ ನಿವೇಶನವು ಅಯೋಧ್ಯೆ ರೈಲ್ವೆ ನಿಲ್ದಾಣದ ಸಮೀಪದಲ್ಲೇ ಇದೆ. ರಿಯಲ್ಎಸ್ಟೇಟ್ ಡೀಲರ್ಗಳು ಮಾರುಕಟ್ಟೆದರಕ್ಕಿಂತ ಕಡಿಮೆ ದೊರದಲ್ಲಿ ಇಂತಹ ನಿವೇಶನಗಳನ್ನುಮಾರಾಟ ಮಾಡುವ ಕೊಡುಗೆಯನ್ನು ನೀಡುತ್ತಿದ್ದಾರೆಂದು ವಿಶ್ವಹಿಂದೂ ಪರಿಷತ್ ನಾಯಕ ಚಂಪತ್ ರಾಯ್ ಹೇಳಿರುವುದಾಗಿ ಇಂಡಿಯನ್ಎಕ್ಸ್‌ ಪ್ರೆಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News