ಹೌದಿ ಬಂಡುಕೋರರ ಡ್ರೋಣ್ ಹೊಡೆದುರುಳಿಸಿದ ಅರಬ್ ಮಿತ್ರಪಡೆ
Update: 2021-06-19 17:56 GMT
ರಿಯಾದ್, ಜೂ.19: ಸೌದಿ ಅರೇಬಿಯದ ಖಮಿಸ್ ಮುಷಾಯ್ಟ ಗುರಿಯಾಗಿಸಿಕೊಂಡು ಹೌದಿ ಬಂಡುಗೋರರು ಹಾರಿಬಿಟ್ಟಿದ್ದ ಡ್ರೋಣ್ ಅನ್ನು ಅರಬ್ ಮಿತ್ರಪಡೆ ಹೊಡೆದುರುಳಿಸಿದೆ ಎಂದು ಸ್ಥಳೀಯ ಟಿವಿ ಚಾನೆಲ್ ವರದಿ ಮಾಡಿದೆ.
ಯೆಮನ್ ನಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದಿರುವ ಸರಕಾರದ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಹೋರಾಡುತ್ತಿರುವ ಮಿತ್ರಪಡೆ, ದೇಶದ ಪ್ರಜೆಗಳ ರಕ್ಷಣೆಗೆ ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಇರಾಕ್ ಬೆಂಬಲಿತ ಹೌದಿ ಬಂಡುಗೋರರು ಯೆಮನ್ ಆಡಳಿತದ ವಿರುದ್ಧ ನಿರಂತರ ದಾಳಿ ನಡೆಸುತ್ತಿವೆ.