ರಾಜೀವ್ ಗಾಂಧಿ ಹತ್ಯೆ ಪ್ರಕರಣ: 3 ವಾರಗಳ ಬಳಿಕ ಪೇರರಿವಾಲನ್ ಮನವಿ ವಿಚಾರಣೆ; ಸುಪ್ರೀಂ

Update: 2021-06-22 18:13 GMT

ಹೊಸದಿಲ್ಲಿ, ಜೂ. 22: ಪರೋಲ್ ನೀಡುವಂತೆ ಕೋರಿದ ಎ.ಜಿ. ಪೇರರಿವಾಲನ್ ಮನವಿಯನ್ನು ಮೂರು ವಾರಗಳ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಪೇರರಿವಾಲನ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಪ್ರಕರಣದಲ್ಲಿ ವಿಚಾರಣೆಯನ್ನು ಮುಂದೂಡುವಂತೆ ಕೋರಿ ಪೇರರಿವಾಲನ್ ಅವರ ವಕೀಲ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ ಎಂಬುದನ್ನು ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಆಗೂ ದಿನೇಶ್ ಮಹೇಶ್ವರಿ ಅವರಿದ್ದ ರಜಾಕಾಲದ ಪೀಠ ಗಮನ ಸೆಳೆಯಿತು. ‌

‘‘ಪತ್ರವಿದೆ (ಪ್ರಕರಣದ ವಿಚಾರಣೆ ಮುದೂಡಿಕೆ ಕೋರಿ ಸಲ್ಲಿಸಿದ ಪತ್ರ). ಇದನ್ನು ಸೂಕ್ತ ನ್ಯಾಯಪೀಠ ಮೂರು ವಾರಗಳ ಬಳಿಕ ವಿಚಾರಣೆಗೆ ಪರಿಗಣಿಸಲಿದೆ’’ ಎಂದು ನ್ಯಾಯಪೀಠದ ಆದೇಶ ಹೇಳಿದೆ. ವೈದ್ಯಕೀಯ ತಪಾಸಣೆಗೆ ಒಳಗಾಗಲು ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್ 23ರಂದು ಪೇರರಿವಾಲನ್ ನ ಪರೋಲ್ ಅನ್ನು ಒಂದು ವಾರಗಳ ಕಾಲ ವಿಸ್ತರಿಸಿತ್ತು. ಅಲ್ಲದೆ, ಆಸ್ಪತ್ರೆಗೆ ಭೇಟಿ ನೀಡುವ ಸಂದರ್ಭ ಪೇರರಿವಾಲನ್ ಗೆ ಪೊಲೀಸ್ ರಕ್ಷಣೆ ನೀಡುವಂತೆ ತಮಿಳುನಾಡು ಸರಕಾರಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News