ಯುಎಇ ಉದ್ಯಮ ಸಂಸ್ಥೆಗಳು ತಮ್ಮ 'ಅಂತಿಮ ಫಲಾನುಭವಿ ಮಾಲಿಕ'ನ ಕುರಿತು ಮಾಹಿತಿ ನೀಡದೇ ಇದ್ದಲ್ಲಿ ಭಾರೀ ದಂಡ
Update: 2021-07-06 06:47 GMT
ದುಬೈ: ತಮ್ಮ ಉದ್ಯಮ ಸಂಸ್ಥೆಯ "ಅಂತಿಮ ಫಲಾನುಭವಿ ಮಾಲಿಕ" ಯಾರು ಎಂಬ ಕುರಿತು ಮಾಹಿತಿ ಒದಗಿಸದೇ ಇರುವ ಸಂಯುಕ್ತ ಅರಬ್ ಸಂಸ್ಥಾನದ ವಾಣಿಜ್ಯ ಸಂಸ್ಥೆಗಳು ಜುಲೈ 8ರಿಂದ ಭಾರೀ ಮೊತ್ತದ ದಂಡ ತೆರಬೇಕಿದೆ.
ಜುಲೈ 1ರಿಂದ ಆರಂಭಗೊಂಡ ಮೊದಲ ಹಂತದಲ್ಲಿ ರೆಗ್ಯುಲೇಶನ್ ಆಫ್ ಅಲ್ಟಿಮೇಟ್ ಬೆನಿಫೀಶಿಯಲ್ ಓನರ್ ಪ್ರೊಸೀಜರ್ಸ್ ಇದರ ಕ್ಯಾಬಿನೆಟ್ ರೆಸೊಲ್ಯೂಶನ್ ಸಂಖ್ಯೆ (58), 2020 ಅನ್ನು ಉಲ್ಲಂಘಿಸುವ ಉದ್ಯಮ ಸಂಸ್ಥೆಗಳಿಗೆ ಲಿಖಿತ ಎಚ್ಚರಿಕೆ ನೀಡಲಾಗುವುದು.
ನಿಯಮ ಉಲ್ಲಂಘಿಸುವ ವಾಣಿಜ್ಯ ಸಂಸ್ಥೆಗಳಿಗೆ ಜುಲೈ 8ರಿಂದ ಆರಂಭಗೊಳ್ಳಲಿರುವ ಎರಡನೇ ಹಂತದಲ್ಲಿ ಸಚಿವಾಲಯವು ದಂಡ ವಿಧಿಸಲಿದೆ.
ಆರಂಭಿಕ ಹಂತದಲ್ಲಿ ಸಂಬಂಧಿತ ಪ್ರಾಧಿಕಾರಗಳು ಉದ್ಯಮ ಸಂಸ್ಥೆಗಳ ದಾಖಲೆಗಳನ್ನು ಪರಿಶೀಲಿಸಲಿದ್ದು ಉಲ್ಲಂಘನೆಗಳು ಕಂಡು ಬಂದಲ್ಲಿ ಲಿಖಿತ ಎಚ್ಚರಿಕೆ, ನಂತರ ಸ್ಥಳ ಭೇಟಿ, ಪರಿಶೀಲನೆಯ ಬೆನ್ನಲ್ಲಿ ದಂಡ ವಿಧಿಸಲಾಗುತ್ತದೆ.