ಭಾರತ ಸೇರಿದಂತೆ 6 ದೇಶಗಳ ವಿಮಾನ ಸಂಚಾರ ನಿರ್ಬಂಧ ಜುಲೈ 31ರವರೆಗೆ ವಿಸ್ತರಿಸಿದ ಯುಎಇ

Update: 2021-07-17 17:08 GMT

ದುಬೈ, ಜು.17: ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ಪ್ರಯಾಣಿಕರ ವಿಮಾನಗಳಿಗೆ ವಿಧಿಸಲಾಗಿರುವ ನಿರ್ಬಂಧ ಜುಲೈ 31ರವರೆಗೆ ವಿಸ್ತರಿಸಲಾಗಿದೆ ಎಂದು ಯುಎಇ ಹೇಳಿದೆ. ರಾಜತಾಂತ್ರಿಕರಿಗೆ, ಯುಎಇ ಪ್ರಜೆಗಳಿಗೆ ಅಥವಾ ಗ್ಲೋಬಲ್ ವೀಸಾ ಹೊಂದಿರುವವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಆದರೆ ಇವರು ವಿಮಾನ ಪ್ರಯಾಣಕ್ಕಿಂತ 48 ಗಂಟೆ ಮೊದಲು ಪಿಸಿಆರ್ ಪರೀಕ್ಷೆ ನಡೆಸಿದ ವರದಿ ಹೊಂದಿರಬೇಕು ಎಂದು ಯುಎಇಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎತಿಹಾದ್ ಏರ್ವೇಸ್ ಹೇಳಿದೆ. ‌

ದುಬೈ ಮೂಲದ ಎಮಿರೇಟ್ಸ್ ವಿಮಾನಯಾನ ಸಂಸ್ಥೆಯೂ ದಕ್ಷಿಣ ಆಫ್ರಿಕಾ ಮತ್ತು ನೈಝೀರಿಯಾದ ವಿಮಾನಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಜುಲೈ 31ರವರೆಗೆ ವಿಸ್ತರಿಸಿದೆ. ಈ 6 ದೇಶಗಳ ವಿಮಾನಗಳಿಗೆ ನಿರ್ಬಂಧವನ್ನು ಈ ಹಿಂದೆ ಜುಲೈ 21ರವರೆಗೆ ವಿಸ್ತರಿಸಲಾಗಿತ್ತು. ನಿರ್ಬಂಧ ಯಾವಾಗ ಅಂತ್ಯಗೊಳ್ಳಲಿದೆ ಎಂಬ ಬಗ್ಗೆ ಯುಎಇಯ ಜನರಲ್ ಏವಿಯೇಷನ್ ಅಥಾರಿಟಿ(ಜಿಸಿಎಎ) ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News