ಹಜ್ ಯಾತ್ರೆ ಕೈಗೊಂಡ 58,518 ಮಂದಿಯಲ್ಲಿ 25,000 ಮಂದಿ ವಲಸಿಗರು

Update: 2021-07-22 07:35 GMT

ಮಕ್ಕಾ: ಈ ವರ್ಷ ಹಜ್ ಯಾತ್ರ ಕೈಗೊಂಡ ಒಟ್ಟು 58,518 ಪುರುಷ ಹಾಗೂ ಮಹಿಳಾ ಯಾತ್ರಾರ್ಥಿಗಳ ಪೈಕಿ 25,000ಕ್ಕೂ ಹೆಚ್ಚು ವಲಸಿಗರಿದ್ದಾರೆ. ಒಟ್ಟು ಹಜ್ ಯಾತ್ರಾರ್ಥಿಗಳ ಪೈಕಿ 25,702 ಮಹಿಳೆಯರಿದ್ದರೆ, 32,816 ಪುರುಷರಿದ್ದರು. ಹಜ್ ಮತ್ತು ಉಮ್ರಾ ಸಚಿವಾಲಯ ಮತ್ತು ಮಕ್ಕಾ ನಗರ ಮತ್ತು ಪವಿತ್ರ ಸ್ಥಳಗಳ ರಾಯಲ್ ಕಮಿಷನ್ ಬಿಡುಗಡೆಗೊಳಿಸಿದ ಜಂಟಿ ಹೇಳಿಕೆಯಲ್ಲಿ ಮೇಲಿನ ಮಾಹಿತಿ ಒದಗಿಸಲಾಗಿದೆ ಎಂದು saudigazette.com.sa ವರದಿ ಮಾಡಿದೆ.

ಒಟ್ಟು ಯಾತ್ರಾರ್ಥಿಗಳ ಪೈಕಿ ಸೌದಿಯ ನಾಗರಿಕರ ಸಂಖ್ಯೆ 33,000ಕ್ಕೂ ಅಧಿಕವಿದ್ದು ಇವರ ಪೈಕಿ 16,753 ಮಂದಿ ಪುರುಷರು ಹಾಗೂ 16,000ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಸೌದಿ ನಿವಾಸಿ ಯಾತ್ರಾರ್ಥಿಗಳ ಸಂಖ್ಯೆ 25,000ಕ್ಕೂ ಅಧಿಕವಾಗಿದೆ. ಮಕ್ಕಾದಲ್ಲಿ ನಾಲ್ಕು ವಲಯಗಳ ಆಧಾರದಲ್ಲಿ ಯಾತ್ರಾರ್ಥಿಗಳನ್ನು ವಿಂಗಡಿಸಲಾಗಿದೆ.

ಕೆಂಪು ವಲಯದಡಿಯಲ್ಲಿ ನೋಂದಣಿ ಮಾಡಿದ ಯಾತ್ರಾರ್ಥಿಗಳ ಸಂಖ್ಯೆ 16,900ಕ್ಕೂ ಅಧಿಕವಾಗಿದ್ದರೆ, ಹಸಿರು ವಲಯದ ನೋಂದಣಿ ಸಂಖ್ಯೆ 20,000ಕ್ಕೂ ಅಧಿಕವಾಗಿದೆ. ನೀಲಿ ವಲಯ ಹಾಗೂ ಹಳದಿ ವಲಯಗಳಲ್ಲಿ ಕ್ರಮವಾಗಿ 12,476 ಮಂದಿ ಹಾಗೂ 9,000 ಮಂದಿ ನೋಂದಣಿ ಮಾಡಿದ್ದಾರೆ.

ಯಾತ್ರಾರ್ಥಿಗಳ ಉಳಿದುಕೊಳ್ಳುವಿಕೆಗೆ 213 ಶಿಬಿರಗಳ ಏರ್ಪಾಟು ಮಾಡಲಾಗಿದೆ. ಇವುಗಳಲ್ಲಿ 71 ಶಿಬಿರಗಳು ಮಿನಾ ಮತ್ತು ಅರಾಫತ್‍ನಲ್ಲಿ, 71 ಶಿಬಿರಗಳು ಮುಝ್ದಾಲಿಫಾಹ್‍ನಲ್ಲಿ ಹಾಗೂ 848 ಕೊಠಡಿಗಳನ್ನು ಮಿನಾ ಟವರ್ ಗಳಲ್ಲಿ ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News